ನ್ಯೂಸ್

ಬಿಎಂಟಿಸಿ ಸಿಸಿ ಕ್ಯಾಮರಾಗಳ ದೃಶ್ಯ ಪೊಲೀಸರಿಗೆ ನೀಡಲಾಗಿದೆ- ರಾಮಲಿಂಗಾ ರೆಡ್ಡಿ

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ತನಿಖೆಗೆ ಅನುಕೂಲವಾಗುವಂತೆ ಬಿಎಂಟಿಸಿ ಬಸ್ ಗಳ ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಪೊಲೀಸರಿಗೆ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.


ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸ್ ಇಲಾಖೆಯ ಮನವಿ ಮೇರೆಗೆ ಬಿಎಂಟಿಸಿಯ ವ್ಯವಸ್ಥಾಪಕ ನಿದೇರ್ಶಕರು ಬಸ್‌ನಲ್ಲಿನ ದೃಶ್ಯಾವಳಿಗಳನ್ನು ಹಸ್ತಾಂತರ ಮಾಡಿದ್ದಾರೆ. ಆತ ಎಲ್ಲಿ ಹತ್ತಿದ್ದ, ಎಲ್ಲಿ ಇಳಿದ ಎಂಬೆಲ್ಲಾ ವಿವರಗಳು ದೃಶ್ಯಾವಳಿಯಲ್ಲಿವೆ. ಮುಂದಿನ ಹಂತದಲ್ಲಿ ಆರೋಪಿಯನ್ನು ಪತ್ತೆ ಹಚ್ಚುವ ಸಂಬಂಧಪಟ್ಟಂತೆ ಪೊಲೀಸರು ತನಿಖೆ ನಡೆಸುತ್ತಾರೆ. ಬಿಎಂಟಿಸಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದರಿಂದ ಇಂತಹ ಸಂದರ್ಭದಲ್ಲಿ ಅದು ಸಾಕಷ್ಟು ಅನುಕೂಲವಾಗುತ್ತದೆ. ಹೊಸದಾಗಿ ಖರೀದಿಸುವ ಬಹುತೇಕ ಎಲ್ಲಾ ಬಸ್‌ಗಳಲ್ಲಿ ಸಿಸಿ ಕ್ಯಾಮರಾ, ಪ್ಯಾನಿಕ್ ಬಟನ್, ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳ ಸೌಲಭ್ಯ ಇರುತ್ತದೆ. ಹಳೆ ಬಸ್‌ಗಳಿಗೂ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳ ಅಳವಡಿಕೆಯಿಂದ ವಾಹನಗಳ ಕಳ್ಳತನ ಗುರುತಿಸಲು ಸಾಧ್ಯವಾಗುತ್ತದೆ. ವಾಹನ ಎಲ್ಲಿ ಸಂಚರಿಸುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹದು ಎಂದರು.

ವೋಲ್ವೋ ಬಸ್‌ನಲ್ಲಿ ಶಂಕಿತ ಸಂಚಾರ:
ಕೆೆಯಲ್ಲಿ ಬಾಂಬ್ ಇಟ್ಟಿದ್ದ ಶಂಕಿತ ವೋಲ್ವೋ ಎಸಿ ಬಸ್‌ನಲ್ಲಿ ಸಂಚರಿಸಿದ್ದಾನೆ. ಆ ಬಸ್ ಡಿಪೋ ೨೫ಕ್ಕೆ ಸೇರಿದ್ದಾಗಿದ್ದು, ರೂಟ್ ನಂಬರ್ ೫೦೦ ಸಿ ಕೆಎ೫೭ ಎ್-೧೮೬ ಐಟಿಪಿಎಲ್-ಎಚ್‌ಎಸ್‌ಆರ್ ಲೇಔಟ್ ನಡುವೆ ಸಂಚಾರ ಮಾಡುವ ಬಸ್ ಇದಾಗಿದೆ. ಈ ಬಸ್‌ನಲ್ಲಿ ಶಂಕಿತ ಸಂಚಾರ ಮಾಡಿರುವುದು ಗೊತ್ತಾಗಿದೆ. ಶುಕ್ರವಾರ ಬೆಳಗ್ಗೆ ಸಮಯ ೧೧: ೫೦ ಬಂದಿದ್ದ ಶಂಕಿತ ಬಸ್‌ನಲ್ಲಿ ಸಂಚರಿಸಿದ್ದಾನೆ. ವೋಲ್ವೋ ಬಸ್‌ನಲ್ಲಿ ವಿಡಿಯೋ ರೆಕಾರ್ಡ್ ಆಗಿದೆ. ಐಟಿಪಿಎಲ್ ಹಾಗೂ ಹೂಡಿ ಭಾಗಕ್ಕೆ ಸಂಚಾರ ಮಾಡಿದ್ದಾನೆ. ಪೊಲೀಸರು ಬಸ್‌ನಲ್ಲಿ ಆತನ ಫಿಂಗರ್ ಪ್ರಿಂಟ್‌ಗಾಗಿ ಶೋಧ ನಡೆಸಿದ್ದಾರೆ.

ತಪ್ಪಿದ ದೊಡ್ಡ ದುರಂತ:
ರಾಮೇಶ್ವರಂ ಕೆೆಯಲ್ಲಿ ಇಟ್ಟಿದಂತಹ ಬಾಂಬ್ ಉದ್ದವಾಗಿ ಸ್ಫೋಟಗೊಂಡು ಕೆೆಯ ಚಾವಣಿಗೆ ಬಡಿದಿದೆ. ಸ್ಫೋಟದ ತೀವ್ರತೆಗೆ ಛಾವಣಿ ಹಾರಿ ಹೋಗಿದೆ. ಒಂದು ವೇಳೆ ಏನಾದರೂ ಆ ಬಾಂಬ್ ಅಡ್ಡವಾಗಿ ಸ್ಫೋಟಗೊಂಡಿದ್ದೆ ಆಗಿದ್ದರೆ ೧೦ ರಿಂದ ೧೫ ಜನ ಸಾವನ್ನಪ್ಪುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ. ಮತ್ತೊಂದೆಡೆ ಹತ್ತು ಸೆಕೆಂಡ್ ಅಂತರದಲ್ಲಿ ಎರಡು ಬಾರಿ ಬಾಂಬ್ ಸ್ಫೋಟಗೊಂಡಿದೆ. ಒಂದು ವೇಳೆ ಎರಡು ಬಾಂಬ್‌ಗಳು ಒಟ್ಟಿಗೆ ಸ್ಫೋಟಗೊಂಡಿದ್ದರೆ ಕೆೆ ಕಟ್ಟಡ ಛಿದ್ರಗೊಂಡು ಅಪಾರ ಪ್ರಮಾಣದ ಸಾವು-ನೋವು ಸಂಭವಿಸುತ್ತಿತ್ತು. ಆದರೆ ಎರಡು ಬಾರಿ ಬಾಂಬ್ ಸ್ಫೋಟಿಸಿದ್ದರಿಂದ ಕಡಿಮೆ ಪ್ರಮಾಣದ ಅನಾಹುತಗಳಾಗಿವೆ.

ಗಂಡಾಂತರದಿಂದ ತಪ್ಪಿಸಿದ ಅಮ್ಮನ ೆನ್ ಕಾಲ್
ರಾಮೇಶ್ವರಂ ಕೆೆಯಲ್ಲಿ ಊಟ ಮಾಡಲು ಬಂದ ಟೆಕ್ಕಿಯೊಬ್ಬ ಸ್ಫೋಟದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಅಮ್ಮನ ೆನ್ ಕಾಲ್ ಆತನನ್ನು ದೊಡ್ಡ ಗಂಡಾಂತರದಿಂದ ಪಾರು ಮಾಡಿದೆ. ಟೆಕ್ಕಿ ಕುಮಾರ್ ಅಲಂಕೃತ್ ಎಂಬಾತ ಊಟ ಮಾಡಲು ಶುಕ್ರವಾರ ಮಧ್ಯಾಹ್ನ ರಾಮೇಶ್ವರಂ ಕೆೆಗೆ ಬಂದು ದೋಸೆ ಆರ್ಡರ್ ಮಾಡಿದ್ದ. ಬಾಂಬ್ ಸ್ಫೋಟವಾದ ೨೦ ಮೀಟರ್ ದೂರದಲ್ಲಿ ಕುಳಿತುಕೊಳ್ಳಲು ಮುಂದಾದರು. ಇದೇ ವೇಳೆ ಆತನ ತಾಯಿ ಕರೆ ಮಾಡಿದ್ದಾರೆ. ಹೋಟೆಲ್‌ನಲ್ಲಿ ಸ್ವಲ್ಪ ಗದ್ದಲವಿದ್ದ ಹಿನ್ನೆಲೆಯಲ್ಲಿ ಏನು ಕೇಳಿಸುತ್ತಿಲ್ಲ ಹೊರಗಡೆ ಬಂದು ಮಾತನಾಡುವಂತೆ ತಾಯಿ ಹೇಳಿದ್ದಾರೆ. ಹೀಗಾಗಿ ಆತ ಹೋಟೆಲ್‌ನಿಂದ ಹೊರಬಂದ ಕೆಲವೇ ಕ್ಷಣದಲ್ಲಿ ಬಾಂಬ್ ಸ್ಫೋಟವಾಗಿದೆ. ನನ್ನ ಅಮ್ಮ ನನ್ನ ಪಾಲಿನ ದೇವರು, ಅವರ ಒಂದು ಕರೆ ನನ್ನನ್ನು ದೊಡ್ಡ ಗಂಡಾಂತರದಿಂದ ಕಾಪಾಡಿದೆ. ನನ್ನ ಅಮ್ಮನಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅಲಂಕೃತ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.