Trisha at Vijay Swearing in Ceremony 
ನ್ಯೂಸ್

ವಿಜಯ್​ ಪದಗ್ರಹಣ ಸಂಭ್ರಮದಲ್ಲಿ ತ್ರಿಶಾ ಭಾಗಿ; ಮಲ್ಲಿಗೆ ಮುಡಿದು, ಸೀರೆ ಉಟ್ಟು 'ಸೆಂಟರ್​ ಆಫ್​ ಅಟ್ರಾಕ್ಷನ್'​ ಆದ ಲಿಯೋ ನಟಿ..Trisha

ಪ್ರಮುಖ ಮುಖ್ಯಾಂಶಗಳು

  • ವಿಜಯ್ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ ನಟಿ ತ್ರಿಶಾ ಕೃಷ್ಣನ್.
  • ವಿಜಯ್ ಕುಟುಂಬಸ್ಥರ ಜೊತೆ ವಿವಿಐಪಿ ಗ್ಯಾಲರಿಯಲ್ಲಿ ಕುಳಿತ ತ್ರಿಶಾ
  • 'ಗಿಲ್ಲಿ' ಮತ್ತು 'ಲಿಯೋ' ಜೋಡಿಯ ಸ್ನೇಹಕ್ಕೆ ಸಾಕ್ಷಿಯಾದ ರಾಜಕೀಯ ವೇದಿಕೆ.
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ನಟ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಅದ್ಧೂರಿ ಸಮಾರಂಭಕ್ಕೆ ಚೆನ್ನೈನ ಜವಾಹರ್ ಲಾಲ್ ನೆಹರು ಕ್ರೀಡಾಂಗಣ ಸಾಕ್ಷಿಯಾಗಿದೆ. ಈ ಐತಿಹಾಸಿಕ ಕ್ಷಣದಲ್ಲಿ ನಟಿ ತ್ರಿಶಾ ಕೃಷ್ಣನ್​(Trisha at Vijay Swearing in Ceremony) ಆಗಮಿಸಿದ್ದು, ಮತ್ತೊಂದು ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಿದೆ.

ತ್ರಿಶಾ ಲುಕ್ ಹೀಗಿತ್ತು

ತ್ರಿಶಾ ಕೃಷ್ಣನ್ ಅವರು ತಿಳಿ ನೀಲಿ ಬಣ್ಣದ ರೇಷ್ಮೆ ಸೀರೆಯನ್ನು ಉಟ್ಟು, ಜಡೆಗೆ ಮಲ್ಲಿಗೆ ಹೂ ಮುಡಿದು ಬಂದಿರುವುದು ಎಲ್ಲರ ಗಮನ ಸೆಳೆಯುವಂತೆ ಮಾಡಿತು. ಆಕರ್ಷಕವಾದ ಸಮುದ್ರ ಹಸಿರು ಬಣ್ಣದ ರೇಷ್ಮೆ ಸೀರೆಗೆ ಚಿನ್ನದ ಬಣ್ಣದ ಜರಿ ಇದ್ದು, ಅದಕ್ಕೊಪ್ಪುವಂತೆ ಕ್ರೀಮ್ ಬಣ್ಣದ ಬ್ಲೌಸ್ ಧರಿಸಿದ್ದರಯ. ಬಿಳಿ ಬಣ್ಣದ ಸ್ಟೋನ್​ವುಳ್ಳ ನೆಕ್ಲೇಸ್, ಕಿವಿಯೋಲೆ ಮತ್ತು ಕೂದಲಿಗೆ ಮಲ್ಲಿಗೆ ಹೂವನ್ನು ಮುಡಿದು ಸಾಂಪ್ರದಾಯಿಕವಾಗಿ ಕಾಣುತ್ತಿದ್ದರು.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್

ಸರಳ ಹಾಗೂ ಸುಂದರವಾದ ಸೀರೆಯಲ್ಲಿ ಮಿಂಚಿದ ತ್ರಿಶಾ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿವೆ. ವಿಜಯ್ ಅವರ ಕುಟುಂಬದ ಸದಸ್ಯರು ಮತ್ತು ಆಪ್ತ ಗೆಳೆಯರ ಜೊತೆಗೆ ತ್ರಿಶಾ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. 'ಗಿಲ್ಲಿ' ಚಿತ್ರದಿಂದ ಆರಂಭವಾದ ಇವರ ಸ್ನೇಹ ಮತ್ತು ವೃತ್ತಿ ಬಾಂಧವ್ಯ ಈಗ ರಾಜಕೀಯ ವೇದಿಕೆಯಲ್ಲೂ ಮುಂದುವರೆದಿರುವುದು ವಿಶೇಷ.
ವಿಜಯ್ ಮತ್ತು ತ್ರಿಶಾ ಬೆಳ್ಳಿತೆರೆಯ ಯಶಸ್ವಿ ಜೋಡಿಗಳಲ್ಲಿ ಒಬ್ಬರು. ಇತ್ತೀಚೆಗೆ 'ಲಿಯೋ' ಸಿನಿಮಾದಲ್ಲಿ ಈ ಜೋಡಿ ಮತ್ತೆ ಒಂದಾಗಿ ಅಬ್ಬರಿಸಿತ್ತು. ಇಂದು ವಿಜಯ್ ಅವರು ತಮ್ಮ ಜೀವನದ ಅತಿ ದೊಡ್ಡ ಮೈಲಿಗಲ್ಲನ್ನು ತಲುಪುತ್ತಿರುವಾಗ, ಅವರ ಆತ್ಮೀಯ ಗೆಳತಿ ಹಾಗೂ ಸಹನಟಿ ತ್ರಿಶಾ ಅವರು ಸಮಾರಂಭಕ್ಕೆ ಆಗಮಿಸಿ ವಿಜಯ್ ಅವರಿಗೆ ಶುಭ ಹಾರೈಸಿದರು.
ನಟಿ ತ್ರಿಶಾ ಮಾತ್ರವಲ್ಲದೆ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕರು, ನಿರ್ಮಾಪಕರು ಮತ್ತು ಹಿರಿಯ ನಟರು ಸಮಾರಂಭಕ್ಕೆ ಆಗಮಿಸಿದ್ದಾರೆ. ರಾಜಕೀಯವಾಗಿ ವಿಜಯ್ ಅವರಿಗೆ ಬೆಂಬಲ ಸೂಚಿಸಲು ಚಿತ್ರರಂಗದ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ವಿಜಯ್ ಅವರ ತಂದೆ ಎಸ್‌ಎ ಚಂದ್ರಶೇಖರ್ ಮತ್ತು ತಾಯಿ ಶೋಭಾ ಅವರ ಪಕ್ಕದಲ್ಲೇ ತ್ರಿಶಾ ಅವರು ಕುಳಿತು ಸಂಭ್ರಮಿಸುತ್ತಿದ್ದ ದೃಶ್ಯಗಳು ಕಂಡುಬಂದವು, (ಏಜೆನ್ಸೀಸ್).