ಆಧಾರ ರಕ್ತದಾನಿಗಳ ಸೇವಾ ಟ್ರಸ್ಟ್ನ ವಾರ್ಷಿಕೋತ್ಸವವನ್ನು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎನ್.ಗೋಪಿನಾಥ್ ಉದ್ಘಾಟಿಸಿದರು. ಕೆ.ಜೆ.ಪ್ರಶಾಂತ್ ಶಾಸಿ, ಬಿ.ಆರ್.ಜಗದೀಶ್, ಅಶ್ವಿನಿ ಆರ್. ಮೂರ್ತಿ, ಸಿಹಿಮೊಗೆ ಶ್ರೀನಿವಾಸ್ ಇತರರಿದ್ದರು. 
ನ್ಯೂಸ್

ರಕ್ತದಾನ ಮಾಡಿದರೆ ಆರೋಗ್ಯ ಸುಧಾರಣೆ: ಎನ್.ಗೋಪಿನಾಥ್

ಶಿವಮೊಗ್ಗ: ಒಮ್ಮೆ ರಕ್ತದಾನ ಮಾಡುವುದರಿಂದ ಮೂರು ಜೀವ ಉಳಿಸಬಹುದು. ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಆರೋಗ್ಯ ಸುಧಾರಣೆ ಆಗಲಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಆಧಾರ ರಕ್ತದಾನಿಗಳ ಸೇವಾ ಟ್ರಸ್ಟ್ನ 14ನೇ ವಾರ್ಷಿಕೋತ್ಸವ, ಅಭಿನಂದನೆ, ಸನ್ಮಾನ, ಪ್ರಶಸ್ತಿ ಪ್ರದಾನ ಹಾಗೂ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಹಳಷ್ಟು ಬಾರಿ ತುರ್ತು ಸಂದರ್ಭದಲ್ಲಿ ರಕ್ತದ ಕೊರತೆ ಎದುರಾಗುತ್ತದೆ. ಬೇಸಿಗೆಯಲ್ಲಿ ರಕ್ತ ಕೊಡುವವರ ಸಂಖ್ಯೆ ವಿರಳವಾಗುತ್ತಿದೆ. ಡೆಂೆ, ಅಪಘಾತ, ಶಸಚಿಕಿತ್ಸೆ ಸಂದರ್ಭಗಳಲ್ಲಿ ರಕ್ತಕ್ಕೆ ಹೆಚ್ಚಿನ ಬೇಡಿಕೆ ಇದ್ದು, ರಕ್ತದಾನಿಗಳ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ತಿಳಿಸಿದರು.
ಟ್ರಸ್ಟ್ ಗೌರವಾಧ್ಯಕ್ಷ ಕೆ.ಜೆ.ಪ್ರಶಾಂತ್ ಶಾಸಿ, ಅಧ್ಯಕ್ಷ ಸಿಹಿಮೊಗೆ ಶ್ರೀನಿವಾಸ್, ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷ ಸುರೇಶ್ ದುರ್ಗಪ್ಪ, ಮಿಡ್‌ಟೌನ್ ರೋಟರಿ ಚಾರಿಟಿ ೌಂಡೇಷನ್ ಶಿವಪ್ರಸಾದ್ ಟಿ. ಪಟೇಲ್, ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ದೇವು, ಆಟೋ ಕಾಂಪ್ಲೆಕ್ಸೃ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು.

ಕರ್ನಾಟಕ ಕಲಾರತ್ನ ಪ್ರಶಸ್ತಿ ಪ್ರದಾನ
ರಕ್ತದಾನ ಶಿಬಿರದ ಮೂಲಕ 101ನೇ ಬಾರಿ ರಕ್ತ ನೀಡಿದ ಟ್ರಸ್ಟ್ ಗೌರವಾಧ್ಯಕ್ಷ ಪ್ರಶಾಂತ್ ಶಾಸಿ, ಜೀವ ರಕ್ಷಕ್ ಹಾಗೂ ಸೇವಾ ಟ್ರಸ್ಟ್ ಖಜಾಂಚಿ ಬಿ.ಆರ್.ಜಗದೀಶ್ ಅವರಿಗೆ ಕರ್ನಾಟಕ ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಿರುತೆರೆ ನಟಿ ಅಶ್ವಿನಿ ಆರ್. ಮೂರ್ತಿ, ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಕಸ್ತೂರಬಾ ಪ್ರೌಢಶಾಲೆ ವಿದ್ಯಾರ್ಥಿನಿ ಜಿ.ಸ್ಪರ್ಶಾ ಶರವಣ ಅವರನ್ನು ಸನ್ಮಾನಿಸಲಾಯಿತು.