ನ್ಯೂಸ್

ಮೈಸೂರಿನ ಎನ್‌ಐಇ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಮೈಸೂರು: ವಿಶ್ವೇಶ್ವರ ನಗರದ ಎನ್‌ಐಇ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಏಡ್ಸ್ ಪ್ರತಿಬಂದಕ ಮತ್ತು ನಿಯಂತ್ರಣ ಘಟಕ, ಎನ್‌ಐಇ ಪ್ರಥಮ ದರ್ಜೆ ಕಾಲೇಜು, ಲಯನ್ಸ್ ಬ್ಲಡ ಸೆಂಟರ್ ಜೀವದಾರ ವತಿಯಿಂದ ರಕ್ತದಾನ ದಿನಾಚರಣೆ ಅಂಗವಾಗಿ ಮಂಗಳವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಕಾಲೇಜಿನ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಶಿಬಿರ ಉದ್ಘಾಟಿಸಿದ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಜಿಲ್ಲಾ ಮೇಲ್ವಿಚಾರಕಿ ಸವಿತಾ ಮಾತನಾಡಿ, ರಕ್ತದಾನದ ಮೂಲಕ ಹಲವರ ಜೀವ ಉಳಿಸಲು ಸಾಧ್ಯವಿದ್ದು, ಎಲ್ಲರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದರು.

ಎನ್‌ಐಇ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಗೋಪಾಲಕೃಷ್ಣ ಅರಸ್ ಮಾತನಾಡಿ, ಇಂದಿನ ಯುವಜನತೆ ದೇಶದ ಸಂಪತ್ತು. ನಿಮ್ಮ ಒಂದು ಸೇವೆ ದೇಶವನ್ನು ಮತ್ತು ಜೀವವನ್ನು ಕಾಪಾಡಬಲ್ಲದು. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ನಮ್ಮ ಮನಸ್ಸು ಇನ್ನೊಬ್ಬರ ಉಳಿವಿಗೆ ಸಹಕರಿಸಬೇಕು ಎಂದು ಹೇಳಿದರು.

ರಕ್ತದಾನ ಮಾಡುವವರಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚು ಇರಬೇಕು, ಪ್ರತಿ ನಾಲ್ಕು ತಿಂಗಳು ಒಮ್ಮೆ ರಕ್ತದಾನ ಮಾಡಬಹುದು. ನಿಮ್ಮ ಸೇವಾಗುಣ ಸಮಾಜಕ್ಕೆ ಮಾದರಿ ಆಗಬೇಕು ಎಂದು ಕಿವಿಮಾತು ಹೇಳಿದರು

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕಾಲೇಜು ಅಭಿವೃದ್ಧಿ ಅಧಿಕಾರಿ ಸುಮಾ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಕುಮಾರ್, ಸಹ ಕಾರ್ಯಕ್ರಮ ಅಧಿಕಾರಿ ದಿನಕರ್, ಯೂತ್ ರೆಡ್‌ಕ್ರಾಸ್ ಸಂಯೋಜನಾಧಿಕಾರಿಗಳಾದ ಶೈಲಜಾ, ನವ್ಯ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಹಾಗೂ ಇತರರು ಇದ್ದರು.