ಗೋಣಿಕೊಪ್ಪಲು: ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಸಮಿತಿ, ಯುವ ದಸರಾ ಸಮಿತಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಶ್ರೀ ಕಾವೇರಿ ಕಲಾ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ನೂರಾರು ಜನರು ರಕ್ತದಾನ ಮಾಡಿದರು.
ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಶ್ರೀ ಪ್ರಮೋದ್ ಗಣಪತಿ ಅವರು 59ನೇ ಬಾರಿ ರಕ್ತದಾನ ಮಾಡಿ ಎಲ್ಲರಿಗೂ ಮಾದರಿಯಾದರು. ಈ ಸಂದರ್ಭದಲ್ಲಿ ಗೋಣಿಕೊಪ್ಪಲು ಯುವ ದಸರಾ ಸಮಿತಿ ಅಧ್ಯಕ್ಷ ಅಂಕಿತ್ ಪೊನ್ನಪ್ಪ, ರೆಡ್ ಕ್ರಾಸ್ ಪೊನ್ನಂಪೇಟೆ ತಾಲೂಕಿನ ಸಭಾಪತಿ ಬಿ.ಎನ್.ಪ್ರಕಾಶ್, ಉಪಸಭಾಪತಿ ದಿಲನ್ ಚಂಗಪ್ಪ, ಕಾರ್ಯದರ್ಶಿ ಚಂದನ್ ಕಾಮತ್, ಸಹ ಕಾರ್ಯದರ್ಶಿ ಎಂ.ಎಂ.ನಾಗೇಶ್, ಕೋಶಾಧಿಕಾರಿ ಪಿ.ಜಿ.ರಾಜಶೇಖರ್, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಚೈತ್ರಾ ಚೇತನ್, ಪತ್ರಕರ್ತ ಜಗದೀಶ್ ಜೋಡುಬೀಟಿ, ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಸಮಿತಿ ಉಪಾಧ್ಯಕ್ಷ ನಾಯಂದಿರ ಶಿವಾಜಿ ಗಣೇಶ ರೈ, ತಿರುನೆಲ್ಲಿಮಾಡ ಜೀವನ ಹಾಗೂ ಯುವ ದಸರಾ ಸಮಿತಿ ಹಾಗೂ ರೆಡ್ ಕ್ರಾಸ್ ಸಂಸ್ಥೆ ಪ್ರಮುಖರು ಉಪಸ್ಥಿತರಿದ್ದರು.