ಕೊಳ್ಳೇಗಾಲದ ಸಿದ್ದಯ್ಯನಪುರ ಸಮೀಪದ ಅರುಣೋದಯ ಯೇಸು ಚರ್ಚ್‌ನಲ್ಲಿ ಭಾರತೀಯ ಕ್ರೈಸ್ತ ದಿವಸದ ಅಂಗವಾಗಿ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿ ದಾನಿಗಳನ್ನು ಪ್ರಶಂಸಿಸಿದರು. ವಿನ್ಸೆಂಟ್ ಅಮಲ್‌ದಾಸ್ , ಬಿ.ತೋಟೇಶ್ ಇತರರು ಇದ್ದರು. 
ನ್ಯೂಸ್

ಕ್ರೈಸ್ತ ದಿವಸದ ಅಂಗವಾಗಿ ರಕ್ತದಾನ

ಕೊಳ್ಳೇಗಾಲ: ಪಟ್ಟಣದ ಸಿದ್ದಯ್ಯನಪುರ ಸಮೀಪದ ಅರುಣೋದಯ ಯೇಸು ಚರ್ಚ್‌ನಲ್ಲಿ ಭಾರತೀಯ ಕ್ರೈಸ್ತ ದಿವಸದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಭಾನುವಾರ ಆಯೋಜಿಸಲಾಗಿತ್ತು.

ಶಿಬಿರಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿ ಮಾತನಾಡಿ, ರಕ್ತದಾನ ಅಮೂಲ್ಯವಾದ ಜೀವ ಉಳಿಸುವ ಕಾರ್ಯವಾಗಿದೆ. ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು. ಆರೋಗ್ಯಕರ ಸಮಾಜಕ್ಕೆ ಇಂತಹ ಶಿಬಿರಗಳು ಅತ್ಯಗತ್ಯ ಎಂದರು.

ಶಿಬಿಎದಲ್ಲಿ ಸುಮಾರು 85 ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. 17 ಬಾರಿ ರಕ್ತದಾನ ಮಾಡಿದ ಮಧುವನಹಳ್ಳಿಯ ಮೋಹನ್ ಎಂಬುವರನ್ನು ಪ್ರಶಂಸಿಸಲಾಯಿತು.

ಈ ವೇಳೆ ಅರುಣೋದಯ ಚರ್ಚ್‌ನ ಸಭಾಪಾಲಕ ಪಾಸ್ಟರ್ ವಿನ್ಸೆಂಟ್ ಅಮಲ್‌ದಾಸ್ ಹಾಗೂ ಶ್ರೀಕಾಂತ್, ಫಿಲಿಪ್, ಲೋಕೇಶ್, ಪ್ರತಾಪ್, ಪ್ರವೀಣ್, ಲಿಂಗರಾಜು, ಮೋಹನ್, ಅಭಿಷೇಕ್, ಸಿದ್ದರಾಜು, ಚಾಮರಾಜನಗರ ರಕ್ತ ನಿಧಿ ಕೇಂದ್ರದ ನೌಕರರು ಇದ್ದರು.