Amritsar: ಪಂಜಾಬ್‌ನ ಅಮೃತಸರದ ಮಜಿತಾ ರಸ್ತೆ ಬೈಪಾಸ್ ಪ್ರದೇಶದಲ್ಲಿ ಇಂದು (ಮಂಗಳವಾರ, ಮೇ.27) ಬೆಳಿಗ್ಗೆ 9.30 ರ ಸುಮಾರಿಗೆ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಶಂಕಿತ ಭಯೋತ್ಪಾದಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಹೆಂಡತಿಗೆ ಕ್ಯಾನ್ಸರ್! ಪತಿಯ ಪ್ರೀತಿ ಪತ್ನಿಯನ್ನು ಸಾವಿನ ಅಂಚಿನಿಂದ ಪಾರು ಮಾಡಿದೆ.. love
ಸ್ಫೋಟದಲ್ಲಿ ಆ ವ್ಯಕ್ತಿಯ ತೋಳುಗಳು ಮುರಿದುಹೋಗಿವೆ. ಮೃತ ವ್ಯಕ್ತಿ ಖಾಲಿಸ್ತಾನಿ ಉಗ್ರನಾಗಿರಬಹುದು ಎಂದು ಅಮೃತಸರ ಗ್ರಾಮೀಣ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಣೀಂದರ್ ಸಿಂಗ್ ತಿಳಿಸಿದ್ದಾರೆ.
ದೊಡ್ಡ ಸ್ಫೋಟದ ಶಬ್ದದಿಂದ ಗಾಬರಿಗೊಂಡ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ತಕ್ಷಣ ಆಗಮಿಸಿ ತನಿಖೆ ಆರಂಭಿಸಿದರು.
ಮೃತ ವ್ಯಕ್ತಿ, ಹರ್ವಿಂದರ್ ಸಿಂಗ್ ಸಧು ನೇತೃತ್ವದ ಬಬ್ಬರ್ ಖಾಲಸಾ ಇಂಟರ್ ನ್ಯಾಷನಲ್ (ಬಿಕೆಐ) ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ ಎಂದು ಸಿಂಗ್ ಹೇಳಿದ್ದಾರೆ.
ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ. (ಏಜೆನ್ಸೀಸ್)