ನ್ಯೂಸ್

ಕೃಷ್ಣಮೃಗ ಅಭಯಾರಣ್ಯದ ಶಾಶ್ವತ ಅಂಚೆ ಚಿತ್ರ ರದ್ಧತಿ ಬಿಡುಗಡೆ

ರಾಣೆಬೆನ್ನೂರ: ಶಾಶ್ವತ ಚಿತ್ರ ರದ್ದತಿಯಿಂದ ಕೃಷ್ಣಮೃಗ ಅಭಯಾರಣ್ಯ ಪ್ರಪಂಚದಾದ್ಯಂತ ಪ್ರಚಾರ ಹೊಂದಲು ಸಹಾಯಕವಾಗುತ್ತದೆ ಎಂದು ಬೆಂಗಳೂರು ಆಫ್​ ಪೋಸ್ಟಲ್​ ಸವಿರ್ಸಸ್​ ವಲಯ ನಿರ್ದೇಶಕಿ ವಿ. ತಾರಾ ಹೇಳಿದರು.

ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಸೋಮವಾರ ಕೃಷ್ಣಮೃಗ ಅಭಯಾರಣ್ಯದ ಶಾಶ್ವತ ಚಿತ್ರ ರದ್ಧತಿ ಬಿಡುಗಡೆ ಸಮಾರಂಭದಲ್ಲಿ ಶಾಶ್ವತ ಚಿತ್ರ ರದ್ಧತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅಂಚೆ ಕಚೇರಿಯ ಪೋಸ್ಟ್​ ಮಾಸ್ಟರ್​ ವಾಸವಾಂಬ ಅಧ್ಯಕ್ಷತೆ ವಹಿಸಿದ್ದರು. ಶಾಶ್ವತ ಅಂಚೆ ಚಿತ್ರ ರದ್ದತಿಯ ಹಿನ್ನೆಲೆ ಮತ್ತು ಮಹತ್ವದ ಕುರಿತು ಅಂಚೆ ಅಧೀಕ್ಷಕ ಮಂಜುನಾಥ ಹುಬ್ಬಳ್ಳಿ ಉಪನ್ಯಾಸ ನೀಡಿದರು. ಅಂಚೆ ಚಿತ್ರ ರದ್ದತಿಯ ರೇಖಾ ವಿನ್ಯಾಸಕ ಹರೀಶ ಮಾಳಪ್ಪನವರ ಅವರನ್ನು ಸನ್ಮಾನಿಸಲಾಯಿತು.

ವಲಯ ಅರಣ್ಯಾಧಿಕಾರಿ ಲಿಂಗಾರೆಡ್ಡಿ ಮಂಕಣಿ, ಅಂಚೆ ನಿರೀಕ್ಷಕ ಮಂಜುನಾಥ ದೊಡ್ಡಮನಿ, ಅಂಚೆ ಸಹಾಯಕಿ ಪ್ರೇಮಾ ವಾಲಿ, ಮಹಾದೇವ ಕಿತ್ತೂರ ಇನ್ನಿತರರು ಇದ್ದರು.