ನ್ಯೂಸ್

ಕೇರಳದ ತ್ರಿಸ್ಸೂರ್​ನಲ್ಲಿ ಬಿಜೆಪಿಯ ಸುರೇಶ್ ಗೋಪಿ ಮುನ್ನಡೆ

ತ್ರಿಸ್ಸೂರ್​ : ಕೇರಳದಲ್ಲಿ ತ್ರಿಸ್ಸೂರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ(ಎನ್​ಡಿಎ) ಅಭ್ಯರ್ಥಿ ನಟ ಸುರೇಶ್ ಗೋಪಿ ಮುನ್ನಡೆ ಸಾಧಿಸುತ್ತಿದ್ದಾರೆ. ಮಲಯಾಳಂ ನಟನಾಗಿ, ಟಿವಿ ಆ್ಯಂಖರ್​ ಆಗಿ, ಗಾಯಕನಾಗಿ ಗೋಪಿ ಅವರಿಗಿರುವ ಜನಪ್ರಿಯತೆಯನ್ನು ನಂಬಿ ಬಿಜೆಪಿ ಗೆಲ್ಲುವ ಹಿರಿದಾಸೆ ಹೊಂದಿದೆ.

ಕಾಂಗ್ರೆಸ್​​ನಿಂದ ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಕರುಣಾಕರನ್ ಅವರ ಮಗಳಾದ ಪದ್ಮಜ ವೇಣುಗೋಪಾಲ್ ಸ್ಪರ್ಧಿಸುತ್ತಿದ್ದು, ಲೆಫ್ಟ್​ ಡೆಮಾಕ್ರಟಿಕ್ ಫ್ರಂಟ್​(ಎಲ್​ಡಿಎಫ್​)ನಿಂದ ಪಿ.ಬಾಲಚಂದ್ರನ್ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಮೂವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.

ತ್ರಿಸ್ಸೂರ್ ತಮ್ಮ ತಂದೆ ಕರುಣಾಕರನ್​​ ಅವರ ವಿಶ್ವಾಸಾರ್ಹ ಕ್ಷೇತ್ರವಾಗಿರುವುದನ್ನು ಪದ್ಮಜ ವೇಣುಗೋಪಾಲ್ ನಂಬಿಕೊಂಡಿದ್ದಾರೆ. (ಏಜೆನ್ಸೀಸ್)