ನ್ಯೂಸ್

ಬಿಜೆಪಿಯ 2ನೇ ಪ್ರಣಾಳಿಕ ಬಿಡುಗಡೆ; LKG ಟು PG ಉಚಿತ ಶಿಕ್ಷಣ; ಸ್ಫರ್ಧಾತ್ಮಕ ಆಕಾಂಕ್ಷಿಗಳಿಗೆ ಮಾಸಿಕ 15,000 ರೂ!

ದೆಹಲಿ: 2025ರ ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯ 2ನೇ ಸಂಕಲ್ಪ ಪತ್ರ(ಪ್ರಣಾಳಿಕೆ) ಕೇಂದ್ರದ ಮಾಜಿ ಸಚಿವ ಅನುರಾಗ್​ ಠಾಕೂರ್​ ಮಂಗಳವಾರ ಅನಾವರಣ ಮಾಡಿದರು.

ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ನಿರ್ಗತಿಕರಿಗೆ ಬಾಲ್ಯದಿಂದ (LKG) ಸ್ನಾತಕೋತ್ತರ ಪದವಿ(PG) ಶಿಕ್ಷವನ್ನು ಉಚಿತವಾಗಿ ನೀಡಲಿದ್ದೇವೆ. ಅಲ್ಲದೆ, ಸ್ಫರ್ಧಾತ್ಮಕ ಆಕಾಂಕ್ಷಿಗಳಿಗೆ ಅಂದರೆ ಯುಪಿಎಸ್​ಸಿ ಮತ್ತು ರಾಜ್ಯ ಸ್ಥಳೀಯ ಪೊಲೀಸ್​ ಪರೀಕ್ಷೆಗಳಿಗೆ ತಯಾರಾಗುತ್ತಿರುವವರಿಗೆ ಆರ್ಥಿಕ ಉತ್ತೇಜನ ನೀಡುವ ಉದ್ದೇಶದಿಂದ ಮಾಸಿಕ 15,000 ರೂ,(ಎರಡು ಪ್ರಯತ್ನಗಳ ಬಳಿಕ ಮುಂದುವರಿದವರಿಗೆ) ನೀಡುವುದಾಗಿ ಭರವಸೆ ನೀಡಿದ್ದಾರೆ.

ಭೀಮ್​ ರಾಂ ಅಂಬೇಡ್ಕರ್​ ಸ್ಟೈಫಂಡ್​ ಯೋಜನೆಯಡಿ ಐಟಿಐ ಮತ್ತು ಪಾಲಿಟೆಕ್ನಿಕ್ ಕೇಂದ್ರಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಮಾಸಿಕ ತಲಾ 1,000 ಸಾವಿರ ರೂ. ಘೋಷಿಸಿದ್ದಾರೆ.ಅದರಂತೆ ಟ್ಯಾಕ್ಸಿ ಡ್ರೈವರ್​ಗಳಿಗೆ 10 ಲಕ್ಷ ರೂ. ಮತ್ತು ಆಟೋ ಡ್ರೈವರ್​ಗಳಿಗೆ 5 ಲಕ್ಷ ರೂ. ವಿಮೆಯ ಭರವಸೆ ನೀಡಿದ್ದಾರೆ.  ಬಿಜೆಪಿ ಅಧಿಕಾರಕ್ಕೆ ಬಂದರೆ ಎಎಪಿ ಸರ್ಕಾರದ ಅಕ್ರಮಗಳು ಮತ್ತು ಹಗರಣಗಳ ತನಿಖೆಗಾಗಿ ಬಿಜೆಪಿ ಎಸ್‌ಐಟಿ ರಚಿಸಲಿದೆ ಎಂದು ಘೋಷಿಸಿದರು.

70 ವಿಧಾನಸಭೆ ಕ್ಷೇತ್ರ ಸದಸ್ಯರ ದೆಹಲಿ ವಿಧಾನಸಭೆಗೆ ಫೆ.5 ರಂದು ಚುನಾವಣೆ ನಡೆಯಲಿದ್ದು, ಫೆ.8ರಂದು ಫಲಿತಾಂಶಗಳು ಹೊರಬೀಳಲಿದೆ.(ಏಜೆನ್ಸೀಸ್​)