ನ್ಯೂಸ್

ಬಿಜೆಪಿ ಪಟ್ಟಿಯಲ್ಲಿ ಯಾವ ಜಾತಿಗೆ ಎಷ್ಟೆಷ್ಟು ಟಿಕೆಟ್​?

Webdesk - Athul Damale

ಬೆಂಗಳೂರು: ಜಾತಿ ಆಧಾರಿತ ರಾಜಕೀಯ ಒಳ್ಳೆಯದಲ್ಲ, ಎನ್ನುವ ಮಾತು ಬಹಳ ಕಾಲದಿಂದ ಇದೆ. ಆದರೆ, ಈ ವ್ಯವಸ್ಥೆ ಇನ್ನೂ ಇದ್ದು ಬಹುತೇಕ ಭಾಗಗಳಲ್ಲಿ ಚುನಾವಣೆಯ ಸಂಪೂರ್ಣ ಲೆಕ್ಕಾಚಾರ ಜಾತಿಯ ಮೇಲೆಯೇ ನಿಂತಿರುತ್ತದೆ. ಹೀಗಾಗಿ ಯಾರು ಗೆಲ್ಲಬಹುದು ಎನ್ನುವುದನ್ನು ಊಹಿಸಲು ಈಗಲೂ ಯಾವ ಜಾತಿಯವರ ಜನಸಂಖ್ಯೆ ಎಷ್ಟಿದೆ ಎನ್ನುವುದನ್ನು ಪರಿಗಣಿಸಲಾಗುತ್ತಿದೆ.

ಬಿಜೆಪಿ ಮಾಡಿರುವ ಟಿಕೆಟ್ ಹಂಚಿಕೆಯಲ್ಲಿ ಈ ಜಾತಿಯವರಿಗೆ ಇಷ್ಟು ಟಿಕೆಟ್ ಸಿಕ್ಕಿದೆ:

  1. ಲಿಂಗಾಯತ - 68
  2. ಒಕ್ಕಲಿಗ - 42
  3. ಎಸ್ಸಿ - 37
  4. ಎಸ್ ಟಿ - 18
  5. ಬ್ರಾಹ್ಮಣ - 13
  6. ಈಡಿಗ ಮತ್ತು ಬಿಲ್ಲವ ಸಮುದಾಯ - 8
  7. ಕುರುಬ - 7
  8. ರೆಡ್ಡಿ - 7
  9. ಬಂಟರು - 6
  10. ಮರಾಠ - 3
  11. ಗಾಣಿಗ - 2
  12. ನಾಯ್ಡು - 2
  13. ರಜಪೂತ - 2
  14. ಯಾದವ - 2
  15. ಬಲಿಜ -
  16. ಜೈನರು - 1
  17. ಕೊಡವ - 1
  18. ಕೋಳಿ ಸಮಾಜ - 1
  19. ಕೊಮರಪಂಟ್‌ - 1
  20. ಮೊಗವೀರ - 1
  21. ತಿಗಳ - 1