ನ್ಯೂಸ್

ಟ್ರಂಪಣ್ಣ, ಒಬಾಮಣ್ಣ ಅಥವಾ ಇನ್ನಾರೋ ದೊಡ್ಡಣ್ಣ ಬಂದ್ರೆ ಅವರನ್ನೇನು ಅಂಬಾನಿ ಮನೆಗಾ ಕರೆದುಕೊಂಡು ಹೋಗುತ್ತೀರಾ?

ಬಳ್ಳಾರಿ : ಬಿಜೆಪಿಯವರು ವಿದೇಶಕ್ಕೆ ಹೋದರೆ ಅಲ್ಲಿ ತಾಜ್​ ಮಹಲ್​, ಕುತುಬ್​ ಮೀನಾರ್​, ಗೋಲಗುಮ್ಮಟ ಕಟ್ಟಿಸಿದ್ದು ನಾವು ಎನ್ನುತ್ತಾರೆ. ಆದರೆ ಇಲ್ಲಿ ಮಾತ್ರ ವಿರುದ್ಧ ಮಾತನಾಡುತ್ತಾರೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಸಂವಿಧಾನ ರಕ್ಷಣಾ ಸಮಿತಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಐತಿಹಾಸಿಕ ಸ್ಮಾರಕಗಳನ್ನು ನಿರ್ಮಾಣ ಮಾಡಿದ್ದು ಮುಸಲ್ಮಾನರು. ವಿದೇಶದಲ್ಲಿ ಇವುಗಳನ್ನು ನಿರ್ಮಾಣ ಮಾಡಿದ್ದು ನಾವು ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಾರೆಯೇ ಹೊರತು, ಉದ್ಯಮಿ ಮುಕೇಶ್​ ಅಂಬಾನಿ ಮುಂಬೈನಲ್ಲಿ 27 ಅಂತಸ್ತಿನ ಕಟ್ಟಡ ಕಟ್ಟಿದ್ದಾರೆ ಎಂದು ಹೇಳಿಕೊಳ್ಳುವುದಿಲ್ಲ.

ಭಾರತಕ್ಕೆ ಟ್ರಂಪಣ್ಣ, ಒಬಾಮಣ್ಣ ಅಥವಾ ಇನ್ನಾರೋ ದೊಡ್ಡಣ್ಣ ಬಂದ್ರೆ ಅವರನ್ನೇನು ಮುಕೇಶ್​ ಅಂಬಾನಿ ಮನೆಗ ಕರೆದುಕೊಂಡು ಹೋಗುತ್ತೀರಾ? ಇಲ್ಲ ತಾನೆ. ನೀವು ಕರೆದುಕೊಂಡು ಹೋಗೋದು ತಾಜ್ ಮಹಲ್, ಕುತಬ್ ಮೀನಾರ್​ ಹಾಗೂ ಕೆಂಪು ಕೋಟೆಗೆ. ಭಾರತಕ್ಕೆ ಮುಸಲ್ಮಾನರ ಕೊಡುಗೆ ಏನು ಅಂತೀರಾ? ಇವುಗಳನ್ನು ನಿರ್ಮಿಸಿದ್ದು ಮುಸಲ್ಮಾನರು. ಇವುಗಳನ್ನು ಮುಸಲ್ಮಾನರು ನಿರ್ಮಿಸಿದ್ದರೂ, ಎಲ್ಲ ಭಾರತೀಯರಿಗೆ ಸೇರಿದ ಐತಿಹಾಸಿಕ ಸ್ಮಾರಕಗಳು. ಇದನ್ನು ರಾಜಕೀಯವಾಗಿ ನೋಡಬೇಡಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. (ದಿಗ್ವಿಜಯ ನ್ಯೂಸ್​)