ನ್ಯೂಸ್

ಡ್ರಗ್ಸ್ ಜಾಲದ ಮಾಹಿತಿ ನೀಡಿ; ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನಕ್ಕೆ ಜತೆಯಾಗಿ; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಕರೆ

ಬೆಂಗಳೂರು: ಸಮಾಜಘಾತುಕ ಕೃತ್ಯಗಳಿಗೆ ಕಾರಣವಾಗುವ ಡ್ರಗ್ಸ್ ಜಾಲದ ಬಗ್ಗೆ ಮಾಹಿತಿ ಇದ್ದರೆ ಪೊಲೀಸರಿಗೆ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಕಟೀಲ್​ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ ಅಪರಾಧಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಳಿನಡುಕ ತಂದಂತೆ, ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಪೊಲೀಸ್ ಇಲಾಖೆ ಡ್ರಗ್ಸ್ ಜಾಲದ ವಿರುದ್ಧ ಅಕ್ಷರಶಃ ಸಮರ ಸಾರಿದೆ. ಡ್ರಗ್ಸ್ ಖರೀದಿಸುವವರು, ಮಾರಾಟ ಮಾಡುವವರು, ಪೂರೈಕೆದಾರರು ನಮ್ಮ ಪಾಲಿಗೆ ಸಮಾಜ ದ್ರೋಹಿಗಳು. ಯುವಜನಾಂಗದ ಭವಿಷ್ಯದ ಹಾದಿಯಲ್ಲಿ ಮುಳ್ಳುಗಳಿದ್ದಂತೆ. ಇಂಥ ಮುಳ್ಳುಗಳನ್ನು ಕೀಳಲು ಪೊಲೀಸ್ ಇಲಾಖೆಗೆ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ನಮ್ಮ ಸರ್ಕಾರ ಇಷ್ಟು ಸ್ವಾತಂತ್ರ್ಯ ನೀಡಿದೆ ಎಂದು ನಳಿನ್​ಕುಮಾರ್​ ಟ್ವೀಟ್​ ಮಾಡಿದ್ದಾರೆ.

ನಮ್ಮ ಪಕ್ಷ ಲಕ್ಷಾಂತರ ತಾಯಂದಿರ, ಸಹೋದರಿಯರ ಜತೆ ಇದೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ; 

ಡ್ರಗ್ಸ್ ಸೇವನೆಯಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತವೆ. ಅಪರಾಧ ಜಗತ್ತಿನ ವಿರುದ್ಧ ಇದು ನಮ್ಮ ಹೋರಾಟವಾಗಿದೆ. ರಾಜ್ಯದ ಯಾವುದೇ ಊರು, ತಾಲೂಕು, ಜಿಲ್ಲೆಯ ಕಾರ್ಯಕರ್ತರು, ನಾಗರಿಕರು... ತಮ್ಮಲ್ಲಿ ಡ್ರಗ್ಸ್ ಜಾಲದ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಪೊಲೀಸ್ ಇಲಾಖೆಗೆ ನೀಡಿ, ನಿಮಗೆ ಏನೂ ತೊಂದರೆ ಆಗದಂತೆ ಪಕ್ಷ ನೋಡಿಕೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದಲ್ಲಿ ಜತೆಯಾಗಿ ಎಂದು ಮನವಿ ಮಾಡಿದ್ದಾರೆ.