ನ್ಯೂಸ್

ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲು ಕಾಂಗ್ರೆಸ್ ಪಿತೂರಿ

ಬೆಂಗಳೂರು: ನಕಲಿ, ಸುಳ್ಳು ಸುದ್ದಿಗಳ ಪತ್ತೆ ನೆಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕಲು ಕಾಂಗ್ರೆಸ್ ಸರ್ಕಾರ ಪಿತೂರಿ ಹೂಡಿದೆ ಎಂದು ಬಿಜೆಪಿ ಸಾಮಾಜಿಕ ತಾಣ ಪ್ರಕೋಷ್ಠ ಕಿಡಿಕಾರಿದ್ದು, ಪಕ್ಷದ ರಾಜ್ಯ ಕಚೇರಿಯಲ್ಲಿ ಸಾಮಾಜಿಕ ಜಾಲತಾಣ ಪ್ರಕೋಷ್ಠ ಹಾಗೂ ಕಾನೂನು ಪ್ರಕೋಷ್ಠದ ಜಂಟಿ ಸಭೆ ಭಾನುವಾರ ನಡೆಸಿ, ಈವರೆಗಿನ ಬೆಳವಣಿಗೆಗಳ ಬಗ್ಗೆ ಅವಲೋಕಿಸಿತು.

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ, ಸಾಮಾಜಿಕ ಜಾಲತಾಣಗಳನ್ನು ನಕಲಿ ಮತ್ತು ಸುಳ್ಳು ಸುದ್ದಿ ಹರಿಬಿಟ್ಟು ಜನರ ದಾರಿ ತಪ್ಪಿಸಿದರು. ಆಡಳಿತದ ಚುಕ್ಕಾಣಿ ಹಿಡಿಯುತ್ತಲೇ ಕಾಂಗ್ರೆಸ್ ಪಕ್ಷ ತನ್ನ ನಿಜಬಣ್ಣ ಬಯಲುಗೊಳಿಸಿದೆ.

ಅಧಿಕಾರಾವಧಿಯ ಮೊದಲ 100 ದಿನಗಳಲ್ಲೇ ತನ್ನ ವಿರುದ್ಧ ಮಾಧ್ಯಮವೂ ಸೇರಿ ಯಾರೊಬ್ಬರೂ ಧ್ವನಿ ಎತ್ತದಂತೆ ಒತ್ತಡ ತಂತ್ರ ಪ್ರಯೋಗಿಸಲು ಮುಂದಾಗಿದೆ ಎಂದು ಸಭೆ ಆಕ್ರೋಶ ವ್ಯಕ್ತಪಡಿಸಿ, ಕಾನೂನು ಮುಖೇನ ಉತ್ತರಿಸಲು ಸಜ್ಜಾಗಿದೆ.

ಎದೆಗುಂದದಿರಿ, ದಿಟ್ಟ ಉತ್ತರ

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರನ್ನು ಹುಡುಕಿ ಹೆದರಿಸಲು, ಉಳಿದವರೂ ಚಕಾರ ಎತ್ತದಂತೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಸಭೆ ತೀವ್ರವಾಗಿ ಖಂಡಿಸಿತು.

ರಾಜಕೀಯ ದ್ವೇಷ ಸರಿಯಲ್ಲವೆಂದು ಉಪದೇಶಿಸಿದ ಕಾಂಗ್ರೆಸ್ ನಾಯಕರು, ಹಿಂದಿನ ಸರ್ಕಾರದ ಅವಧಿಯ ಕೇಸ್‌ಗಳನ್ನು ಕೆದಕಿ ರಾಜಕೀಯ ದ್ವೇಷ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.

ಕಾಂಗ್ರೆಸ್‌ನ ತಂತ್ರಕ್ಕೆ ಪ್ರತಿತಂತ್ರಗಳನ್ನು ಹೂಡಲು ಸನ್ನದ್ಧರಾಗಬೇಕು. ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ಹೇಗೆ ನಡೆದುಕೊಳ್ಳುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಏನೆಲ್ಲ ಅಪಪ್ರಚಾರ ಮಾಡಿದೆ ಎಂಬ ಬಗ್ಗೆ ವಿಡಿಯೋ, ಪುರಾವೆಗಳ ಸಂಗ್ರಹವಿದೆ.

ಕಾನೂನು ಎಲ್ಲರಿಗೂ ಒಂದೇ, ಎಲ್ಲರಿಗೂ ಅನ್ವಯಿಸುತ್ತದೆ. ಇದರಿಂದಾಗಿ ಕಾಂಗ್ರೆಸ್‌ನ ಅಸಕ್ಕೆ ಪ್ರತ್ಯಸ ಹೂಡಲು ಸನ್ನದ್ಧರಾಗಬೇಕು ಎಂದು ಸಭೆ ಸಲಹೆ ನೀಡಿದೆ. ಮಾಧ್ಯಮಗಳಿಗೂ ನೋಟಿಸ್ ನೀಡಿ ಬೆದರಿಕೆ ಹಾಕಲು ಪ್ರಯತ್ನಿಸಿರುವುದು ಕಳವಳಕಾರಿ ಬೆಳವಣಿಗೆಯಾಗಿದ್ದು, ಅಭಿವ್ಯಕ್ತಿ ಮತ್ತು ಮಾಧ್ಯಮ ಸ್ವಾತಂತ್ರ್ಯ ಕಿತುಕೊಳ್ಳುವ ಕಾಂಗ್ರೆಸ್ ಸರ್ಕಾರದ ಪ್ರಯತ್ನ ಸಲವಾಗುವುದಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಪಕ್ಷದ ಕಾರ್ಯಕರ್ತರು ಎದೆಗುಂದುವ ಅಗತ್ಯವಿಲ್ಲ. ಸರ್ಕಾರದ ವೈಲ್ಯ, ತಪ್ಪು ನಡೆ ಹಾಗೂ ಜನ ವಿರೋಧಿ ನೀತಿಗಳ ವಿರುದ್ಧ ಜನರ ಪರವಾಗಿ ಧ್ವನಿ ಎತ್ತುವುದು ಹಿಂಜರಿಯುವ ಅಗತ್ಯವಿಲ್ಲ.

ಕಾಂಗ್ರೆಸ್ ಸರ್ಕಾರದ ಖಂಡನಾರ್ಹ ಕ್ರಮಗಳ ವಿರುದ್ಧ ಕಾನೂನು ಹೋರಾಟ ನಡೆಸಲು, ಅಂತಹ ಕೇಸ್‌ಗಳಿಗೆ ಪರಿಹಾರ ಒದಗಿಸಲು ಕಾನೂನು ಪ್ರಕೋಷ್ಠ ಸಿದ್ಧವಿದೆ. ಸಾಮಾಜಿಕ ಜಾಲತಾಣಗಳ ರಚನಾತ್ಮಕವಾಗಿ ಬಳಕೆ, ಸಕ್ರಿಯವಾಗಿ ಪಾಲ್ಗೊಳ್ಳುವಿಕೆಗೆ ಯಾರೂ ಹಿಂಜರಿಯುವ ಅಗತ್ಯವಿಲ್ಲ. ಕಾನೂನು ಮತ್ತು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಪಕ್ಷದ ಸಂಘಟನೆ ಸಮರ್ಥವಾಗಿದೆ ಎಂಬ ವಿಶ್ವಾಸ ತುಂಬಲಾಯಿತು ಎಂದು ಮೂಲಗಳು ತಿಳಿಸಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಇರುವವರು, ಮಾಧ್ಯಮಗಳ ವಿರುದ್ಧ ಕಾಂಗ್ರೆಸ್ ಸರ್ಕಾರ ಕೇಸ್ ದಾಖಲಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದು ಖಂಡನೀಯ. ಈ ಬೆಳವಣಿಗೆ ಗಮನಿಸಿ ಪರಿಹಾರ ಒದಗಿಸಲು ರಾಜ್ಯಮಟ್ಟದ ವಕೀಲರ ತಂಡವನ್ನು ರಚಿಸಲಾಗಿದೆ. -ಕೇಶವ್ ಪ್ರಸಾದ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಹಾಗೂ ಎಂಎಲ್‌ಸಿ.