ಹಿಂದಿನ ದರದಲ್ಲಿ ಬೀಜ ಮಾರಾಟಕ್ಕೆ ಮುಂದಾಗಬೇಕು ಎಂದು ಬಿಜೆಪಿ ರೈತ ಮೋರ್ಚಾ ಮುಖಂಡರು ಚಿಕ್ಕಮಗಳೂರಿನಲ್ಲಿ ಜಂಟಿ ಕೃಷಿ ನಿರ್ದೇಶಕಿ ಸುಜಾತಾ ಅವರಿಗೆ ಮನವಿ ಸಲ್ಲಿಸಿದರು. ದಿನೇಶ್ ಪಾದಮನೆ, ನಾಗರಾಜ್, ಪ್ರಸನ್ನ, ನಿಶಾಂತ್, ಉಮೇಶ್, ಸತೀಶ್, ಕೇಶವ ಇತರರಿದ್ದರು. 
ನ್ಯೂಸ್

ಕಡಿಮೆ ದರದಲ್ಲಿ ಬಿತ್ತನೆ ಬೀಜ ನೀಡಿ

ಜಿ. ಗಜೇಂದ್ರ

ಚಿಕ್ಕಮಗಳೂರು: ಅಧಿಕ ಬೆಲೆಗೆ ಬಿತ್ತನೆ ಬೀಜ ಸರಬರಾಜು ಮಾಡುತ್ತಿರುವುದನ್ನು ನಿಲ್ಲಿಸಿ ಹಿಂದಿನ ದರದಲ್ಲಿ ಬೀಜ ಮಾರಾಟಕ್ಕೆ ಮುಂದಾಗಬೇಕು ಎಂದು ಬಿಜೆಪಿ ರೈತ ಮೋರ್ಚಾ ಮುಖಂಡರು ಶನಿವಾರ ಜಂಟಿ ಕೃಷಿ ನಿರ್ದೇಶಕಿ ಸುಜಾತಾ ಅವರಿಗೆ ಮನವಿ ಸಲ್ಲಿಸಿದರು.
ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್ ಮುಗುಳುವಳ್ಳಿ ಮಾತನಾಡಿ, ರಾಜ್ಯ ಸರ್ಕಾರ ಬಿತ್ತನೆ ಬೀಜಗಳನ್ನು ಕಳೆದ ವರ್ಷಕ್ಕಿಂತ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದರು.
ರೈತಾಪಿ ವರ್ಗ ಈಗಾಗಲೇ ಮಳೆ ಕೊರತೆ, ಬರಗಾಲ, ಅಸಮರ್ಪಕ ಬೆಳೆ, ಸಾಲದ ಬಾಧೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ತತ್ತರಿಸುತ್ತಿದೆ. ಹೆಚ್ಚಿನ ಬೆಲೆ ನೀಡಿ ಬಿತ್ತನೆ ಬೀಜ ಖರೀದಿಸಿ ಕೃಷಿ ಚಟುವಟಿಕೆ ನಡೆಸಲು ಅಶಕ್ತರಾಗಿದ್ದಾರೆ ಎಂದರು.
ಮುಂಗಾರಿನಲ್ಲಿ ಬಿತ್ತನೆಗೆ ಅನುಕೂಲವಾಗುವಂತೆ ಬೀಜಗಳನ್ನು ಹಿಂದಿನ ವರ್ಷದ ದರದಲ್ಲೇ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.
ಬಿತ್ತನೆ ಬೀಜ ವಿಚಾರದಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತಾಪಿ ವರ್ಗದವರೊಂದಿಗೆ ಪಕ್ಷದ ಮುಖಂಡರು ಉಗ್ರ ಹೋರಾಟ ಹಮ್ಮಿಕೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.
ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್ ಪಾದಮನೆ, ಉಪಾಧ್ಯಕ್ಷ ನಾಗರಾಜ್, ಸಾಮಾಜಿಕ ಜಾಲತಾಣದ ಪ್ರಸನ್ನ, ನಗರ ಮಂಡಲ ಅಧ್ಯಕ್ಷ ನಿಶಾಂತ್, ಗ್ರಾಮಾ ಂತರ ಮಂಡಲ ಅಧ್ಯಕ್ಷ ಉಮೇಶ್, ಸತೀಶ್, ಕೇಶವ ಇತರರಿದ್ದರು.