ರಾಣೆಬೆನ್ನೂರ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ತ ಸೆ. 17ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಎಪಿಎಂಸಿ ರೈತ ಭವನದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ನೇಕಾರರ ಪ್ರಕೋಷ್ಠದ ಸಂಚಾಲಕ ಡಾ. ಬಸವರಾಜ ಕೇಲಗಾರ ತಿಳಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವೈದ್ಯಕೀಯ ಪ್ರಕೋಷ್ಠ, ಬಿಜೆಪಿ ತಾಲೂಕು, ನಗರ ಘಟಕ, ಹುಬ್ಬಳ್ಳಿ ಕೆಎಲ್‌ಇ ಸುಚಿರಾಯ ಆಸ್ಪತ್ರೆ ಹಾಗೂ ಡಾ. ಮಹೇಶ ನಾಲವಾಡ ಫೌಂಡೇಶನ್ ವತಿಯಿಂದ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಬಿಪಿ, ಇಸಿಜಿ, ರಕ್ತ ಪಾಸಣೆ, ಬೀನ್ ಡೆನ್ಸಿಟಿ, ಮೆಮೊಗ್ರಫಿ, ಪ್ಯಾಪಸ್ಮೇರ್, ಸಕ್ಕರೆ ಕಾಯಿಲೆ ತಪಾಸಣೆ, ಬೊಜ್ಜುತನ, ಬಿಎಂಐ ಅನಾಲಿಸಸ್ ಸೇರಿ ಇತರ ಆರೋಗ್ಯ ತಪಾಸಣೆ ನಡೆಸಲಾಗುವುದು. ಜತೆಗೆ ಆಹಾರ ಪದ್ಧತಿ ಬಗ್ಗೆ ತಿಳುವಳಿಕೆ, ತೂಕ ಇಳಿಸುವ ಬಗ್ಗೆ ತಿಳುವಳಿಕೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಪ್ರಮುಖರಾದ ಕೆ. ಶಿವಲಿಂಗಪ್ಪ, ಮಲ್ಲಣ್ಣ ಅಂಗಡಿ, ಡಾ. ಶಿವಪ್ರಕಾಶ ತಂಡಿ, ದೀಪಕ ಹರಪನಹಳ್ಳಿ, ಗದಿಗೆಪ್ಪ ಹೊಟ್ಟಿಗೌಡ್ರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.