ಸಾಂದರ್ಭಿಕ ಚಿತ್ರ 
ನ್ಯೂಸ್

ಒಟಿಟಿಯಲ್ಲಿ ಹೆಚ್ಚುತ್ತಿರುವ ಧೂಮಪಾನ ದೃಶ್ಯಗಳು: ಕೂಡಲೇ ಕತ್ತರಿ ಹಾಕಬೇಕೆಂದು ಒತ್ತಾಯ

ದೆಹಲಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳ ಕಾರ್ಯಕ್ರಮಗಳಲ್ಲಿ ಧೂಮಪಾನದ ದೃಶ್ಯಗಳು ಹೆಚ್ಚಾಗುತ್ತಿದ್ದು, ಇಂತಹ ದೃಶ್ಯಗಳಿಗೆ ಕೂಡಲೇ ಕತ್ತರಿ ಹಾಕಬೇಕೆಂದು ಬಿಜೆಪಿ ಸಂಸದ ಮನೋಜ್ ತಿವಾರಿ ಸಂಸತ್ತಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ದೇವರ ಪ್ರಸಾದ ಸೇವಿಸಿ 40 ಭಕ್ತಾದಿಗಳು ಅಸ್ವಸ್ಥ: ಮೆರವಣಿಗೆ ವೇಳೆ ನಡೆದಿದ್ದಿಷ್ಟು..

ಸೋಮವಾರ ಲೋಕಸಭೆಯಲ್ಲಿ ಸಿನಿಮಾಟೋಗ್ರಾಫ್ ತಿದ್ದುಪಡಿ ಮಸೂದೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ತಿವಾರಿ,ರು, ನಟರು, ನಿರ್ದೇಶಕರು, ಚಿತ್ರಕಥೆಗಾರರು ಮತ್ತು ಪ್ರೇಕ್ಷಕರು ಇಂತಹ ದೃಶ್ಯಗಳನ್ನು ಬಯಸುವುದಿಲ್ಲ. ಸರ್ಕಾರವು ಆನ್‌ಲೈನ್ ಕ್ಯುರೇಟೆಡ್ ಕಂಟೆಂಟ್‌ನಲ್ಲಿ ತಂಬಾಕು ಹರಡುವುದನ್ನು ತಡೆಯಲು ತಕ್ಷಣವೇ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಸಿನಿಮಾಟೋಗ್ರಾಫ್ ತಿದ್ದುಪಡಿ ಮಸೂದೆಯನ್ನು ಚಲನಚಿತ್ರ ಪೈರಸಿಯನ್ನು ತಡೆಯುವ ಗುರಿಯನ್ನು ಹೊಂದಿದ್ದು, ಇದನ್ನು ಲೋಕಸಭೆಯಲ್ಲಿ ಸೋಮವಾರ ಅಂಗೀಕರಿಸಲಾಗಿದೆ. ಈಗಾಗಲೇ ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗಿತ್ತು. ಸಿನಿಮಾಗಳ ನಂತರ, OTT ಪ್ಲಾಟ್‌ಫಾರ್ಮ್‌ಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಅತ್ಯುತ್ತಮ ಕೆಲಸಗಳು ನಡೆಯುತ್ತಿವೆ. ಆದರೆ, ಸಿಗರೇಟ್ ಮತ್ತು ತಂಬಾಕು ಸೇವನೆಯ ದೃಶ್ಯಗಳನ್ನು ತೋರಿಸುವುದು ಒಂದು ಪ್ರವೃತ್ತಿಯಾಗಿದೆ ಎಂದು ಸಂಸದರು ಹೇಳಿದ್ದಾರೆ.(ಏಜೆನ್ಸೀಸ್​​)