ನ್ಯೂಸ್

ಕುಮಾರಣ್ಣ ಸಿಎಂ ಆದ್ರೆ ಮೊದಲು ಸಂತೋಷ ಪಡೋದು ನಾನೇ... ಎಂದ ಬಿಜೆಪಿ ಶಾಸಕ!

ತುಮಕೂರು: ತಾನು ಸಿಎಂ ಆಗಬೇಕು, ನಮ್ಮ ಮುಂಡರೇ ಸಿಎಂ ಆಗಬೇಕು, ತಮ್ಮ ಪಕ್ಷದ ಪ್ರಮುಖ ನಾಯ ಸಿಎಂ ಗಾದಿಗೆ ಏರಬೇಕು ಎಂದು ಪ್ರತಿಯೊಬ್ಬರೂ ಹೇಳುವುದನ್ನ ಕೇಳಿದ್ದೇವೆ. ಆದರೆ ಬಿಜೆಪಿ ಎಂಎಲ್​ಸಿಯೊಬ್ಬರು ಜೆಡಿಎಸ್​ನ ಎಚ್​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಮೊದಲು ಮೊದಲು ಖುಷಿ ಪಡೋದೇ ನಾನು... ಎಂದು ಬಹಿರಂಗವಾಗಿಯೇ ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಶಿರಾ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಅಯೋಜಿಸಿದ್ದ ಕುಂಚಿಟಿಗ-ಒಕ್ಕಲಿಗ ಸಮಾವೇಶದಲ್ಲಿ ಮಾಜಿ ಸಿಎಂ ಎಚ್.​ಡಿ. ಕುಮಾರಸ್ವಾಮಿ ಮತ್ತು ಶ್ರೀ ನಂಜಾವದೂತ ಸ್ವಾಮೀಜಿ ಅವರುಗಳ ಎದುರಲ್ಲಿ ಬಿಜೆಪಿ ಎಂಎಲ್​ಸಿ ಎಂ.ಚಿದಾನಂದಗೌಡ ಈ ಮಾತನ್ನು ಹೇಳಿದ್ದಾರೆ.

ನಮ್ಮ ಸಮುದಾಯವನ್ನ ಕೇಂದ್ರದಲ್ಲೂ ಕೂಡ ಒಬಿಸಿ ಪಟ್ಟಿಗೆ ಸೇರಿಸಬೇಕು. ಮುಂದಿನ ಮುಖ್ಯಮಂತ್ರಿ ಕುಮಾರಣ್ಣ ಆದರೆ ಮೊದಲು ಸಂತೋಷ ಪಡೋದು ನಾನೇ... ಅ ಖುಷಿಯಲ್ಲಿ ನಾನೂ ಒಬ್ಬ. ಯಾರೇ ಸಿಎಂ ಆದ್ರೂ ನಮ್ಮ ಸಮುದಾಯವನ್ನ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.