ಬೆಂಗಳೂರು: ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ತೀವ್ರವಾಗಿ ಖಂಡಿಸಿದ್ದಾರೆ. ಗಲಭೆ ನಡೆದ ರಾಗಿಗುಡ್ಡಕ್ಕೆ ಗುರುವಾರ ಬೆಳಿಗ್ಗೆ 11.00 ಗಂಟೆಗೆ ಬಿಜೆಪಿ ನಾಯಕರನ್ನೊಳಗೊಂಡ ಸತ್ಯಶೋಧನ ತಂಡ ಭೇಟಿ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಪಕ್ಷದ ರಾಜ್ತಾಧ್ಯಕ್ಷರ ನೇತೃತ್ವದ ಈ ತಂಡದಲ್ಲಿ ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಡಾ|| ಸಿ.ಎನ್. ಅಶ್ವತ್ಥನಾರಾಯಣ್,
ಮಾಜಿ ಸಚಿವ ಅರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಶಾಸಕ ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಭಾರತಿಶೆಟ್ಟಿ ಇರಲಿದ್ದಾರೆ.
ಈದ್ ಮಿಲಾದ್ ಮೆರವಣಿಗೆ ನೆಪದಲ್ಲಿ ಭಾರತ ಭೂಪಟ ಹಸಿರುಮಯಗೊಳಿಸಿ, ಔರಂಗಜೇಬ್ ದಿ ಸಾಮ್ರಾಟ್, ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡುವ ಟಿಪ್ಪು ಸುಲ್ತಾನ್ ಹಾಗೂ ತಲ್ವಾರ್ ಕಟೌಟ್ ಗಳು ಗಲಭೆಯ ಮೂಲ. ಅಮಾಯಕ ಹಿಂದುಗಳ ಮನೆಗಳ ಮನೆ ಕಲ್ಲು ತೂರಾಟವಾಗಿದೆ.
ಗುಪ್ತಚರ ನಿಷ್ಕ್ರಿಯವಾಗಿದ್ದು, ಎಸ್ ಪಿ ಹಾಗೂ ಪೊಲೀಸರ ಮೇಲೆ ಕಲ್ಲು ತೂರಲಾಗಿದೆ. ಗಂಭೀರ ಸ್ವರೂಪದ ಘಟನೆಯನ್ನು ಕಾಂಗ್ರೆಸ್ ಸರ್ಕಾರ ಹಗುರವಾಗಿ ಪರಿಗಣಿಸಿದೆ. ಮುಸ್ಲಿಮರನ್ನು ಓಲೈಸುವುದಕ್ಕಾಗಿ ಸಣ್ಣ ಘಟನೆ ಎಂಬಂತೆ ಬಿಂಬಿಸುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.
more