ನ್ಯೂಸ್

ಮೋದಿಯವರು ಮುಸ್ಲಿಂ ದ್ವೇಷಿ ಎಂದ ಶಮಾ ಮೊಹಮ್ಮದ್​ ವಿರುದ್ಧ ತಿರುಗಿಬಿದ್ದ ಬಿಜೆಪಿ ನಾಯಕರು...

ನವದೆಹಲಿ: ಕಾಂಗ್ರೆಸ್​ ವಕ್ತಾರೆ ಶಮಾ ಮೊಹಮ್ಮದ್​ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಆರೋಪವೊಂದನ್ನು ಮಾಡಿ ವಿವಾದ ಸೃಷ್ಟಿಸಿದ್ದಾರೆ.

ಟಿವಿ ಡಿಬೇಟ್​ವೊಂದರಲ್ಲಿ ಭಾಗವಹಿಸಿದ್ದ ಅವರು ಪಾಕಿಸ್ತಾನಕ್ಕೆ ಸಂಬಂಧಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ಪಾಕಿಸ್ತಾನಕ್ಕೆ ಕಠಿಣ ಪಾಠ ಕಲಿಸಬೇಕಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಲವು ಬಾರಿ ಹೇಳಿದ್ದಾರೆ. ಪಾಕ್​ ಒಂದು ಮುಸ್ಲಿಂ ರಾಷ್ಟ್ರ ಎಂಬ ಒಂದೇ ಕಾರಣಕ್ಕೆ ಮೋದಿಯವರು ಹೀಗೆ ಹೇಳುತ್ತಾರೆ ಎಂದು ಶಮಾ ಹೇಳಿದ್ದರು. ಮೋದಿಯವರು ಮುಸ್ಲಿಮರ ಮೇಲಿನ ದ್ವೇಷದಿಂದ ಹೀಗೆಲ್ಲ ಮಾತನಾಡುತ್ತಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಮೈಸೂರಿನಲ್ಲಿ ಬಂಧಿತನಾದ ಅತ್ಯಾಚಾರ ಆರೋಪಿಗೆ ಕರೊನಾ; ಛತ್ತೀಸ್​ಗಢದ 60 ಪೊಲೀಸರಿಗೆ ಕ್ವಾರಂಟೈನ್​

ಇದೀಗ ಬಿಜೆಪಿ ಶಮಾ ಮೊಹಮ್ಮದ್​ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ. ಬಿಜೆಪಿ ವಕ್ತಾರ ಸಂಬಿತ್​ ಪಾತ್ರಾ ಅವರು ಟ್ವೀಟ್ ಮೂಲಕ ಶಮಾ ಮೊಹಮ್ಮದ್​ ಹೇಳಿಕೆಯನ್ನು ಖಂಡಿಸಿದ್ದಾರೆ.

ತಮ್ಮ ಹೇಳಿಕೆ ವಿವಾದ ಸೃಷ್ಟಿಯಾಗುತ್ತಿದ್ದಂತೆ ಶಮಾ ಮೌನಕ್ಕೆ ಜಾರಿದ್ದಾರೆ. ನಾನು ಯಾವ ಪ್ರಶ್ನೆಗೂ ಉತ್ತರಿಸುವುದಿಲ್ಲ ಎಂದು ಹೇಳಿದ್ದಾರೆ. ಹಾಗೇ ಸ್ಪಷ್ಟನೆಯನ್ನೂ ನೀಡುವುದಿಲ್ಲ ಎಂದಿದ್ದಾರೆ.

2015ರಲ್ಲಿ ಕಾಂಗ್ರೆಸ್​ ಪಕ್ಷವನ್ನು ಸೇರಿರುವ ಶಮಾ, ಪಕ್ಷದ ಮೀಡಿಯಾ ಪ್ಯಾನಲಿಸ್ಟ್​ ಕೂಡ ಹೌದು. ಟಿವಿ ಡಿಬೇಟ್​ಗಳಲ್ಲಿ ಆಗಾಗ ಭಾಗವಹಿಸುತ್ತಿರುತ್ತಾರೆ. (ಏಜೆನ್ಸೀಸ್​)