ಲಖನೌ: ಇತ್ತೀಚಿನ ವರ್ಷದಲ್ಲಿ ಗಡಿಯಾಚೆಗಿನ ಪ್ರೇಮ್ ಕಹಾನಿ (Love Story) ಸಖತ್ ಸೌಂಡ್ ಮಾಡುತ್ತಿದ್ದು, ಸೀಮಾ ಹೈದರ್, ಅಂಜು ಬಳಿಕ ದೇಶದಲ್ಲಿ ಇದೀಗ ಮತ್ತೊಂದು ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ಇದೀಗ ಉತ್ತರಪ್ರದೇಶದ ಜೌನ್ಪುರದಲ್ಲಿ ಬಿಜೆಪಿ ಕೌನ್ಸಿಲರ್ (BJP Corporator) ಪುತ್ರನೋರ್ವ ಪಾಕ್ ಯುವತಿಯನ್ನು (Pakistan Woman) ಆನ್ಲೈನ್ನಲ್ಲೇ ವರಸಿದ್ದು, ಈ ಸುದ್ದಿ ಹೊಸ ಚರ್ಚೆಯನ್ನೇ ಹುಟ್ಟುಹಾಕಿದೆ.
ಜೌನ್ಪುರ ಜಿಲ್ಲೆಯ ಬಿಜೆಪಿ ಕೌನ್ಸಿಲರ್ (BJP Corporator) ತಹಸೀನ್ ಶಾಹಿದ್ ಅವರು ತಮ್ಮ ಹಿರಿಯ ಮಗ ಮೊಹಮ್ಮದ್ ಅಬ್ಬಾಸ್ ಲಾಹೋರ್ (lahore) ನಿವಾಸಿ ಆಂಡ್ಲೀಪ್ ಜಹ್ರಾ ಅವರೊಂದಿಗೆ ವಿವಾಹ ನಿಶ್ಚಯಿಸಿದ್ದರು. ಉಭಯ ದೇಶಗಳ ನಡುವಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ವರ ಮೊಹಮ್ಮದ್ ಅಬ್ಬಾಸ್ಗೆ ವೀಸಾ ದೊರೆತ್ತಿರಲಿಲ್ಲ. ಹೀಗಾಗಿ ಆನ್ಲೈನ್ನಲ್ಲೇ (Online) ಮದುವೆ ಮಾಡಲಾಗಿದೆ.
ಇದನ್ನೂ ಓದಿ: ಫೈಟ್ ಮಾಡ್ತಾರೆ ಎಂದುಕೊಂಡಿದ್ದೆ, ಎದುರಾಳಿಗಳು ಅಷ್ಟೊಂದು ವೀಕ್ ಎಂದು ತಿಳಿದಿರಲಿಲ್ಲ: DCM DK Shivakumar
ಇದಲ್ಲದೆ ವಧುವಿನ ತಾಯಿ ರಾಣಾ ಯಾಸ್ಮಿನ್ ಜೈದಿ ಅವರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ಕಾರಣ ಮದುವೆಯನ್ನು ಆನ್ಲೈನ್ನಲ್ಲಿ ನಡೆಸು ವರ (Groom) ಹಾಗೂ ವಧುವಿನ (Bride) ಕುಟುಂಬಸ್ಥರು ನಿರ್ಧರಿಸಿದ ಪರಿಣಾಮ ಆನ್ಲೈನ್ನಲ್ಲೇ ವಿವಾಹ ಕಾರ್ಯವನ್ನು ನೆರವೇರಿಸಿದ್ದಾರೆ.
ಶಿಯಾ ಧಾರ್ಮಿಕ ಮುಖಂಡ ಮೌಲಾನಾ ಮಹ್ಫೂಜುಲ್ ಹಸನ್ ಖಾನ್ ಈ ಬಗ್ಗೆ ಪ್ರತಿಕ್ರಿಯಿಸಿ, ಇಸ್ಲಾಂನಲ್ಲಿ ‘ನಿಕಾಹ್’ಗೆ ಮಹಿಳೆಯ ಒಪ್ಪಿಗೆ ಅತ್ಯಗತ್ಯ. ಎರಡೂ ಕಡೆಯ ಮೌಲಾನಾಗಳು ಒಟ್ಟಾಗಿ ಸಮಾರಂಭವನ್ನು ನಡೆಸಿದಾಗ ಆನ್‌ಲೈನ್ ‘ನಿಕಾಹ್’ ಸಾಧ್ಯ ಎಂದು ಹೇಳಿದ್ದಾರೆ. ಬಿಜೆಪಿ ಎಂಎಲ್‌ಸಿ ಬ್ರಿಜೇಶ್ ಸಿಂಗ್ ಪ್ರಿಶು ಮತ್ತು ಇತರ ಗಣ್ಯರು ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದಾರೆ.