ಭೋಪಾಲ್; ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಶೂ ಧರಿಸಿ ಪುಷ್ಪ ನಮನ ಸಲ್ಲಿಸಿದ ಹಿನ್ನೆಲೆ ಬಿಜೆಪಿ ಆಕ್ರೋಶ ಹೊರಹಾಕಿದೆ. ಈ ಕೃತ್ಯವನ್ನು ಅಗೌರವ ಮತ್ತು ಭಾರತೀಯ ಸಾಂಸ್ಕೃತಿಕ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.
ಇದನ್ನೂ ಓದಿ: ಭಾರತದ ಆಪರೇಷನ್ ಸಿಂಧೂರ್ನಿಂದ ಹೆಚ್ಚಿನ ಹಾನಿಯಾಗಿದೆ; ದಾಖಲೆ ಸಮೇತ ಒಪ್ಪಿಕೊಂಡ ಪಾಕಿಸ್ತಾನ| operation-sindoor
ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪ್ರಧಾನ ಕಚೇರಿಗೆ ಪ್ರವೇಶಿಸುವ ಮೊದಲು, ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಆದರೆ ಪುಷ್ಪ ನಮನದ ವೇಳೆ ಅವರು ತಮ್ಮ ಪಾದರಕ್ಷೆಗಳನ್ನು ತೆಗೆಯದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಮಧ್ಯಪ್ರದೇಶದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ "ಸಂಘಟನ್ ಸೃಜನ್ ಅಭಿಯಾನ್"ಗೆ ಚಾಲನೆ ನೀಡಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಈ ಹೊಸ ವಿವಾದದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ 17 ವರ್ಷದ ಟಿಕ್ಟಾಕ್ ಸ್ಟಾರ್ ಸನಾ ಯುಸೂಫ್ ಮೇಲೆ ಗುಂಡಿಕ್ಕಿ ಹತ್ಯೆ; ಮುಂದುವರೆದ ತನಿಖೆ Sana-yousaf
ಇದೇ ವಿಚಾರವಾಗಿ ಬಿಜೆಪಿ ನಾಯಕ ಹಿತೇಶ್ ವಾಜಪೇಯಿ ಮಾತನಾಡಿದ್ದು, ತಮ್ಮ ಅಜ್ಜಿಗೆ ಪುಷ್ಪ ನಮನ ಸಲ್ಲಿಸುವಾಗ ಶೂಗಳನ್ನು ತೆಗೆಯದ ವ್ಯಕ್ತಿ, ಭಾರತ ಮಾತೆಯ ಗೌರವವನ್ನು ಹೇಗೆ ಎತ್ತಿ ಹಿಡಿಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ರಾಹುಲ್ಗಾಂಧಿ ಪುಷ್ಪ ನಮನ ಸಲ್ಲಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸೇರಿದಂತೆ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯಕ್ಕೆ ಆಗಮಿಸಿರುವ ರಾಹುಲ್ ಗಾಂಧಿ ಶೂ ಬಿಚ್ಚದೆ ತನ್ನ ಅಜ್ಜಿಯ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ್ದಾರೆ. ಇದನ್ನು ನಾನು ಇಷ್ಟಪಡುವುದಿಲ್ಲ, ಇದು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು, ಅವರು ಅಂತಹ ವಿಷಯಗಳ ಬಗ್ಗೆ ಸ್ವಲ್ಪ ಹೆಚ್ಚು ಜಾಗರೂಕರಾಗಿರಬೇಕು ಎಂದಿದ್ದಾರೆ. ನಾವೆಲ್ಲರೂ ನಮ್ಮ ಸಂಸ್ಕೃತಿಯ ಬಗ್ಗೆ ಸ್ವಲ್ಪ ಸೂಕ್ಷ್ಮವಾಗಿರಬೇಕು. ಪ್ರತಿಯೊಬ್ಬರೂ ಭಾವನೆಗಳನ್ನು ಹೊಂದಿರುತ್ತಾರೆ ಎಂದು ಅವರು ಕಿಡಿ ಕಾರಿದ್ದಾರೆ.