ನ್ಯೂಸ್

ಮತಾಂತರ ಕಾಯ್ದೆ ಜಾರಿಗೆ ವಿರೋಧ: ಜಿಲ್ಲಾಧ್ಯಕ್ಷರ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ ಮಾತಿನ ಚಕಮಕಿ

Ramanagara

ರಾಮನಗರ : ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಹಾಗೂ ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದವರ ಮೇಲೆ ಮತ್ತು ಚರ್ಚ್‌ನ ಾದರ್‌ಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಯುನೈಟೆಡ್ ಕ್ರಿಶ್ಚಿಯನ್ ಚರ್ಚಸ್ ಆಫ್ ಪಾಸ್ಟರ್ಸ್‌ ಅಸೋಷಿಯೇಷನ್ ಹಾಗೂ ಅಖಿಲ ಭಾರತ ಕ್ರೈಸ್ತ ಮಹಾಸಭಾ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಎದುರು ಮಂಗಳವಾರ ಜವಾಯಿಸಿದ ಪದಾಧಿಕಾರಿಗಳು, ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಸಮುದಾಯ ವಿರೋಧಿಸುತ್ತದೆ. ಸಮುದಾಯಕ್ಕೆ ಒಳಿತಾಗುವ ಯಾವುದೇ ಅಂಶಗಳು ಈ ಕಾಯ್ದೆಯಲ್ಲಿಲ್ಲ. ಕಾಯ್ದೆ ಜಾರಿಯಾದರೆ ಕೋಮುವಾದಿಗಳು ಹೆಚ್ಚುತ್ತಾರೆ, ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಅಶಾಂತಿ, ಅಸಮಾಧಾನ ಉಂಟಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಬಲವಂತ ಮತಾಂತರವನ್ನು ಕ್ರೈಸ್ತ ಸಮುದಾಯ ವಿರೋಧಿಸತ್ತದೆ. ರಾಜ್ಯ ಹಾಗೂ ಜಿಲ್ಲೆಯಲ್ಲಿ ಮತಾಂತರದ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಸುಳ್ಳು ಘಟನೆಗಳನ್ನು ಆಧರಿಸಿ ಕ್ರೈಸ್ತರನ್ನು ದೂರಲಾಗುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಚರ್ಚ್‌ಗಳು ಮತ್ತು ಕ್ರೈಸ್ತ ಸಂ ಸಂಸ್ಥೆಗಳ ಗಣತಿ ನಡೆಸಬೇಕೆಂದು ಆದೇಶಿಸಿರುವುದು ತಿಳಿದ ವಿಷಯವಾಗಿದೆ. ಒಂದು ಸಮುದಾಯವನ್ನು ಗುರಿಯಾಗಿಸಿರುವುದರ ಉದ್ದೇಶವಾದರೂ ಏನು ಎಂದು ಪ್ರತಿಭಟನಾನಿರತರು ಪ್ರಶ್ನಿಸಿದರು.

ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕು ಮತ್ತು ಗ್ರಾಮೀಣ ಪ್ರದೇಶದಲ್ಲಿನ ಚರ್ಚ್‌ಗಳು, ಾದರ್‌ಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಅಲ್ಲದೇ ಚರ್ಚ್‌ನಲ್ಲಿ ಇರುವ ಪವಿತ್ರ ವಸ್ತುಗಳನ್ನು ಧ್ವಂಸ ವಾಡಲಾಗುತ್ತಿದೆ. ಬೈಬಲ್ ಹರಿದು ಹಾಕುವುದು, ಧರ್ಮ ಗುರುಗಳಾದ ಸಭಾ ಪಾಲಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮಾಡಲಾಗುತ್ತಿದೆ, ಸುಳ್ಳು ಮೊಕದ್ದಮೆ ದಾಖಲಿಸಲಾಗುತ್ತಿದೆ. ಇಂತಹ ಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಅಭಿಷೇಕ್ ದೇವಾ, ನಾಗರಾಜು, ಯಾಕೋಬ್, ಟಿ. ಜಾನ್, ವೆಂಕಟರಾಮನ್, ಮೋಹನ್, ಪೌಲ್, ಜೋಸೆಫ್, ಪ್ರಜ್ವಲ್ ಸ್ವಾಮಿ, ನವೀನ್ ಕುವಾರ್, ಜಾನ್ ಇದ್ದರು.