Bitcoin: ಬಿಟ್‌ಕಾಯಿನ್‌ನ ಮೌಲ್ಯವು ಭಾನುವಾರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿ 1,25,000 ಡಾಲರ್ ಗಡಿಯನ್ನು ದಾಟಿದೆ. ಅಂದರೆ ಭಾರತೀಯ ಕರೆನ್ಸಿಯ ಪ್ರಕಾರ, ಒಂದು ಬಿಟ್‌ಕಾಯಿನ್‌ನ ಮೌಲ್ಯ ಸುಮಾರು 1.08 ಕೋಟಿ ರೂ. ಆಗಿದೆ.
ಹೌದು, ಅಮೆರಿಕ ಸರ್ಕಾರದ ಸ್ಥಗಿತದಿಂದಾಗಿ ಹೂಡಿಕೆದಾರರು ಚಿಂತಿತರಾಗಿದ್ದಾರೆ. ಡಾಲರ್ ಮೌಲ್ಯ ದಿನೇ ದಿನೇ ಕುಸಿಯುತ್ತಿದೆ. ಈ ಸಮಯದಲ್ಲಿ ಇದೀಗ ಬಿಟ್‌ಕಾಯಿನ್ ತನ್ನ ಜೀವಿತಾವಧಿಯಲ್ಲಿ ಗರಿಷ್ಟಮಟ್ಟ ತಲುಪಿದೆ.
CoinMarketCap ದತ್ತಾಂಶದ ಪ್ರಕಾರ, ಭಾನುವಾರದ ಮಾರುಕಟ್ಟೆ ಅವಧಿಯಲ್ಲಿ ಡಿಜಿಟಲ್ ಕರೆನ್ಸಿ ಶೇ.2ರಷ್ಟು ಕ್ಕಿಂತ ಹೆಚ್ಚು ಗಳಿಸಿ, ಅದರ ಜೀವಿತಾವಧಿಯ ಗರಿಷ್ಠ ಮಟ್ಟವಾದ 125,559.21 ಡಾಲರ್ ಅನ್ನು ತಲುಪಿತು. ಬಿಟ್‌ಕಾಯಿನ್ ಹಿಂದಿನ ಸಾರ್ವಕಾಲಿಕ ಗರಿಷ್ಠ ಮಟ್ಟವಾದ(ಆಗಸ್ಟ್ 2025) 1,24,500 ಡಾಲರ್ ಅನ್ನು ಹೊಂದಿತ್ತು.
ಪ್ರಸ್ತುತ ಪರಿಸ್ಥಿತಿಯು ಬಿಟ್‌ಕಾಯಿನ್‌ನ ಮೌಲ್ಯವನ್ನು ದಾಖಲೆಯ ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಇದರ ಜೊತೆಗೆ, ಯುಎಸ್ ಷೇರುಗಳಲ್ಲಿ ಲಾಭಗಳು ಮತ್ತು ಬಿಟ್‌ಕಾಯಿನ್-ಸಂಬಂಧಿತ ವಿನಿಮಯ-ವಹಿವಾಟು ನಿಧಿಗಳಿಗೆ ಒಳಹರಿವು ಕಂಡುಬಂದಿದೆ.(ಏಜೆನ್ಸೀಸ್)