ನ್ಯೂಸ್

ನರೇಂದ್ರನ ಜನನ

ಭಾರತದ ಪುನರುತ್ಥಾನಕ್ಕಾಗಿ, ಭಾರತೀಯರು ಕಳೆದುಕೊಂಡಿದ್ದ ಸ್ವಾಭಿಮಾನವನ್ನು, ಜಾಗೃತ ಮಾಡಲು, ಜಗತ್ತಿಗೆ ವೇದಾಂತಬೋಧಿಸಲು, ವಿಶ್ವವಿಜೇತ, ವೀರಸಂನ್ಯಾಸಿ ಸ್ವಾಮಿ ವಿವೇಕಾನಂದರು ಧರೆಗಿಳಿದು ಬಂದರು.

ವಿವೇಕಾನಂದರ ತಾಯಿಯ ಹೆಸರು ಭುವನೇಶ್ವರೀ ದೇವಿ.ಅವರು ಪರಮಭಕ್ತೆ, ಸುಶೀಲವತಿ, ಧೈರ್ಯ-ಸಾಹಸ ಮನೋಭಾವ ದವರು. ಅವರಿಗೆ ಗಂಡುಮಕ್ಕಳಿರಲಿಲ್ಲ, ಆದ್ದರಿಂದ ಕಾಶಿ ವಿಶ್ವನಾಥನ ಬಳಿ ಪ್ರಾರ್ಥಿಸಿದರು. ಒಂದು ವರ್ಷ ಪ್ರತಿ ಸೋಮವಾರ ಉಪವಾಸ ಆಚರಿಸಿದರು. ವ್ರತ ಪ್ರಾರಂಭಿಸಿ ಅಂದು ಒಂದು ವರ್ಷವಾಗಿತ್ತು.

ಭುವನೇಶ್ವರೀ ದೇವಿ ಪರಶಿವನ ಪೂಜೆ-ಧ್ಯಾನಗಳಲ್ಲಿ ನಿರತರಾದರು. ರಾತ್ರಿ ಪರಶಿವನು ಭುವನೇಶ್ವರಿಯ ಸ್ವಪ್ನದಲ್ಲಿ ದರ್ಶನವಿತ್ತನು. ಆಕೆ ಜ್ಯೋತಿರ್ಮಯ ಶಿವನ ಪಾದಕ್ಕೆರಗಿದಳು. ತಕ್ಷಣವೇ ಪರಶಿವನು ಪುಟ್ಟ ತೇಜಸ್ವಿ, ಓಜಸ್ವಿ ಬಾಲಕನಂತೆ ಕಾಣಿಸಿ ಕೊಂಡ. ‘ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ನಿನ್ನ ಮಗನಾಗಿ ಜನಿಸುವೆ’ ಎಂದು ಆಶೀರ್ವದಿಸಿ ದನು. ಆ ದಿನದಿಂದ ಭುವನೇಶ್ವರೀ ದೇವಿಗೆ ತಾನು ಗರ್ಭವತಿ ಆಗಿರುವೆ ಎಂಬ ಅನುಭವ ಉಂಟಾಯಿತು. ಜಗತ್ತಿಗೆ ಬೆಳಕು ತೋರಿಸಲು, ಭಾರತಕ್ಕೆ ತನ್ನ ಅಸ್ತಿತ್ವ ಪುನಃ ಕಂಡು ಕೊಳ್ಳುವುದಕ್ಕೆ ನೆರವಾಗಲು ಪರಶಿವನೇ ಧರೆಗಿಳಿದು ಬಂದ.

ಅಂದು ಸೋಮವಾರ, ಜ.12, 1863ರ ಮುಂಜಾನೆ 6 ಗಂಟೆ 33 ನಿಮಿಷ, 33 ಸೆಕೆಂಡಿಗೆ ಪರಶಿವನು ಅವತರಿಸಿದನು.ಆ ವರ್ಷ ಅಂದು ಮಕರ ಸಂಕ್ರಮಣ. ಆ ಶುಭದಿನದಂದು ತಮಗರಿವಿಲ್ಲದಂತೆ ಅಸಂಖ್ಯಾತ ಜನರು ಪೂಜೆ- ಪ್ರಾರ್ಥನೆಗಳ ಮೂಲಕ ನವಜಾತಶಿಶು ವನ್ನು ಸ್ವಾಗತಿಸಿದ್ದರು. ಇತ್ತ ಕಲ್ಕತ್ತೆಯ ದಕ್ಷಿಣೇಶ್ವರದಲ್ಲಿ ಭೂತ- ವರ್ತ ಮಾನ- ಭವಿಷ್ಯತ್ಕಾಲಗಳನ್ನು ಏಕಕಾಲದಲ್ಲಿ ಕಾಣುತ್ತಿದ್ದ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಸರ್ಪ¤ ಮಂಡಲದಿಂದ ನರ ಋಷಿಯು ದೊಡ್ಡ ನಕ್ಷತ್ರದ ರೂಪದಲ್ಲಿ ಕಲ್ಕತ್ತೆಯೆಡೆಗೆ ಬರುತ್ತಿರುವುದನ್ನು ಕಂಡರು.

ಅದು ತಮ್ಮ ಲೀಲಾ ಕಾರ್ಯದಲ್ಲಿ ನೆರವಾಗುವುದಕ್ಕಾ ಗಿಯೇ ಬರುತ್ತಿರುವ ಮಹಾನ್ ಪುರುಷನ ಸೂಚನೆ ಎಂದು ತಿಳಿದರು. ಅವನ ಹೆಸರೇ ನರೇಂದ್ರನಾಥ ದತ್ತ. ಅವರೇ ಮುಂದೆ ಜಗದ್ವಿಖ್ಯಾತ ಸ್ವಾಮಿ ವಿವೇಕಾನಂದರಾದರು.