ಬೆಂಗಳೂರು: ಹುಡುಗಿ(Girl)ಯರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ನಾನಾ ಕಸರತ್ತು ನಡೆಸುತ್ತಿರುತ್ತಾರೆ. ಇತ್ತೀಚಿಗೆ ಇದೇ ರೀತಿಯ ವಿಡಿಯೋವೊಂದು ಸದ್ದು ಮಾಡುತ್ತಿದೆ. ಸುಂದರ ಹುಡುಗಿ ಲಿಫ್ಟ್(Lift) ಕೇಳಿ ಬೈಕ್ ನಿಲ್ಲಿಸಿದಾಗ ಯುವಕನಿಗೆ ಖುಷಿಯಾಯಿತು. ಆದರೆ ಕೊನೆಗೆ ಆಕೆ ಕೊಟ್ಟ ಟ್ವಿಸ್ಟ್ ತಿಳಿದು ಆಶ್ಚರ್ಯಚಕಿತನಾಗಿದ್ದಾನೆ.
ಇದನ್ನೂ ಓದಿ: Police: ಡಿಎಸ್ಪಿಯಾಗಿ ಕ್ರಿಕೆಟಿಗ ಮೊಹಮ್ಮದ್ ಸಿರಾಜ್!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸುಂದರ ಹುಡಿಗಿ ಯೊಬ್ಬಳು ರಸ್ತೆಯ ಬದಿಯಲ್ಲಿ ನಿಂತು ಕೈ ಎತ್ತಿ ಬೈಕ್ ಸವಾರನಿಗೆ ಲಿಫ್ಟ್ ಕೇಳುತ್ತಾಳೆ. ಚೆಲುವೆಯನ್ನು ನೋಡಿ ಯುವಕ ರೋಮಾಂಚನಗೊಂಡು ಗಾಡಿ ನಿಲ್ಲಿಸುತ್ತಾನೆ.
ಆದರೆ ಹುಡುಗಿ ಇಲ್ಲೊಂದುಟ್ವಿಸ್ಟ್ ಕೊಟ್ಟಿದ್ದಾಳೆ. ಬೈಕಿನ ಹಿಂದೆ ಕೂರುವ ಬದಲು ಒಬ್ಬ ಮುದುಕನನ್ನು ಕರೆದು ಕೂರಿಸುತ್ತಾಳೆ. ಆದರೆ ಇದನ್ನೆಲ್ಲ ಗಮನಿಸದ ಯುವಕ ಖುಷಿಯಿಂದ ಬ್ರೇಕ್ ಹಾಕುತ್ತ ಬೈಕ್ಡ್ರೈವ್ ಮಾಡಿದ್ದಾನೆ. ಸ್ವಲ್ಪ ದೂರ ಹೋದ ನಂತರ ಅನುಮಾನಗೊಂಡು ಬೈಕ್ ನಿಲ್ಲಿಸಿ ಹಿಂತಿರುಗಿ ನೋಡಿದ್ದಾನೆ. ಹಿಂಬದಿ ಹುಡುಗಿಯ ಬದಲು ಅಜ್ಜನನ್ನು ನೋಡಿ ಬೆಚ್ಚಿ ಬೀದ್ದಿದ್ದಾನೆ.
ಈ ಯುವತಿ ವಿನೂತನ ರೀತಿಯಲ್ಲಿ ಬೈಕ್ ಸವಾರನಿಗೆ ಶಾಕ್ ನೀಡಿದ್ದಾಳೆ. ವೀಕ್ಷಣೆ ಮತ್ತು ಲೈಕ್‌ಗಳಿಗಾಗಿ ಇದೆಲ್ಲವನ್ನೂ ಮಾಡಲಾಗಿದೆ, ಆದರೆ ವೀಡಿಯೊ ವೈರಲ್ ಆಗುತ್ತಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಈ ಹುಡುಗಿ ನಿಜಕ್ಕೂ ಶಾಕ್ ಕೊಟ್ಟಿದ್ದಾಳೆ’ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ‘ನಾಚಿಕೆಗೇಡು, ತೋಳ ಹಳ್ಳಕ್ಕೆ ಬಿತ್ತು ಎಂದುಕೊಂದವನಿಗರ ತಕ್ಕ ಪಾಠ ಕಲಿಸಿದ್ದಾಳೆ’ಎಂದು ಪ್ರತಿಕ್ರಿಸಿದ್ದಾರೆ. ಈ ವೀಡಿಯೊ ಪ್ರಸ್ತುತ 2 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಹೊಂದಿದೆ. 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.