ಹೈದರಾಬಾದ್: ( Kurnool Bus Accident ) ಹೈದರಾಬಾದ್ ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಟ್ರಾವೆಲ್ಸ್ ಬಸ್ ಕರ್ನೂಲ್ ಜಿಲ್ಲೆಯ ಬಳಿ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬೆಂಕಿ ಬಸ್ ನಾದ್ಯಂತ ವ್ಯಾಪಿಸಿತು. ಈ ಅಪಘಾತದಲ್ಲಿ 20 ಪ್ರಯಾಣಿಕರು ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ. ಆದರೆ ಈ ಅಪಘಾತದಲ್ಲಿ ಬಸ್ನಲ್ಲಿದ್ದ ಪ್ರಯಾಣಿಕರು ಮಾತ್ರವಲ್ಲದೇ ಬೈಕ್ ಸವಾರ ಕೂಡ ಪ್ರಾಣ ಕಳೆದುಕೊಂಡಿದ್ದ. ಈ ಅಪಘಾತ ಸಂಭವಿಸುವ ಮೊದಲು ಬೈಕ್ ಸವಾರ ಎಲ್ಲಿದ್ದ? ಎನ್ನುವ ಕುರಿತಾಗಿ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಸ್ನಲ್ಲಿ ಒಟ್ಟು 41 ಜನರಿದ್ದರು. ಅವರಲ್ಲಿ ಇಬ್ಬರು ಚಾಲಕರಿದ್ದರು. ಬೈಕ್‌ಗೆ ಡಿಕ್ಕಿ ಹೊಡೆದ ಬಸ್, ಒಂದಷ್ಟು ದೂರ ಬೈಕ ಅನ್ನು ಎಳೆದೊಯ್ದಿತು. ಈ ವೇಳೆ, ಗಾಡಿಯ ಟ್ಯಾಂಕ್ನಿಂದ ಪೆಟ್ರೋಲ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಅಪಘಾತ ಸಂಭವಿಸಿದ ಬಳಿಕ ಬಸ್ ಚಾಲಕನ ನಿಯಂತ್ರಣ ತಪ್ಪಿದೆ ನಿಲ್ಲಿಸುವ ಬದಲು ಬೈಕ್ ಎಳೆದೊಯ್ದದಿದೆ. ಬೈಕ್ ಸವಾರ ಹಾಗೂ ಬಸ್ನಲ್ಲಿದ್ದ ಪ್ರಯಾಣಿಕರಲ್ಲಿ ಕೆಲವರು ಸಾವನ್ನೊಪ್ಪಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಅಪಘಾತಕ್ಕೆ ಬೈಕ್ ಸಾವರನೇ ಕಾರಣನಾ ಎನ್ನುವ ಮಾತು ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ: ಬೈಕ್‌ಗೆ ಬಸ್ ಡಿಕ್ಕಿ: ಗಾಢ ನಿದ್ರೆಯಲ್ಲಿದ್ದ 20 ಪ್ರಯಾಣಿಕರು ಸುಟ್ಟು ಭಸ್ಮ..Kurnool Bus Accident
ಕರ್ನೂಲ್ ಬಸ್ ಅಪಘಾತಕ್ಕೂ ಮುನ್ನ ಬೈಕ್ ಸವಾರ ಪೆಟ್ರೋಲ್ ಬಂಕ್‌ಗೆ ಹೋಗುತ್ತಿರುವ ದೃಶ್ಯಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿವೆ. ಕರ್ನೂಲ್‌ನಲ್ಲಿ ಬೈಕ್ ಸವಾರ ಶಿವಶಂಕರ್ ಅವರ ಕೊನೆಯ ವಿಡಿಯೋ ಇದು.. ಅಪಘಾತಕ್ಕೂ ಮುನ್ನ ಅವರು ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದನ್ನು ನೀವು ವೀಡಿಯೊದಲ್ಲಿ ನೋಡಬಹುದು.
ಶಿವಶಂಕರ್ ಬೆಳಗಿನ ಜಾವ 2:22 ಕ್ಕೆ ಪೆಟ್ರೋಲ್ ಬಂಕ್‌ಗೆ ಬಂದಿದ್ದಾನೆ. ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಈ ವಿಡಿಯೋದಲ್ಲಿ ಮತ್ತೊಬ್ಬ ಯುವಕ ಕೂಡ ಇದ್ದಾನೆ. ಈ ದೃಶ್ಯಗಳು ಬೆಳಗಿನ ಜಾವ 2.23 ಕ್ಕೆ ಸಿಸಿ ದೃಶ್ಯಾವಳಿಗಳಲ್ಲಿ ದಾಖಲಾಗಿವೆ. ಆ ಸಮಯದಲ್ಲಿ ಶಿವಶಂಕರ್ ಕುಡಿದಿದ್ದಂತೆ ತೋರುತ್ತದೆ. ಇದಕ್ಕೂ ಮೊದಲು, ಶಿವಶಂಕರ್ ರಾತ್ರಿ 9:30 ಕ್ಕೆ ಫೋನ್‌ನಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಅಲ್ಲಿಂದ ಹೊರಟಿದ್ದಾನೆ. ಈ ಬಸ್ ಅಪಘಾತವು ಬೆಳಗಿನ ಜಾವ 2:40 ಕ್ಕೆ ಸಂಭವಿಸಿದೆ. ಶುಕ್ರವಾರ ಕರ್ನೂಲ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ ಶಿವಶಂಕರ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಶಿವಶಂಕರ್ ಸಾವಿನ ಸುದ್ದಿ ತಿಳಿದಾಗ ಅವರ ತಾಯಿ ಯಶೋದಾ ಮತ್ತು ಕುಟುಂಬ ಸದಸ್ಯರು ತೀವ್ರವಾಗಿ ಕಣ್ಣೀರಿಟ್ಟರು. ಅವರು ತಕ್ಷಣ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ತಲುಪಿ ಹೃದಯ ವಿದ್ರಾವಕವಾಗಿ ಕಣ್ಣೀರಿಟ್ಟರು.
ಇದನ್ನೂ ಓದಿ: ಕರ್ನೂಲ್ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ 2 ಲಕ್ಷ ರೂ.ಗಳ ಪರಿಹಾರ..Kurnool Bus Accident
ಶಿವಶಂಕರ್ ಕರ್ನೂಲ್ ಮಂಡಲದ ಬಿ. ತಂಡ್ರಪಾಡು ಮಿತಿಯ ಪ್ರಜಾನಗರದಲ್ಲಿ ವಾಸಿಸುತ್ತಿದ್ದ. ಶಿವಶಂಕರ್ ಗ್ರಾನೈಟ್ ಮತ್ತು ಪೇಂಟಿಂಗ್ ಕೆಲಸ ಮಾಡುತ್ತಿದ್ದ. ನಿನ್ನೆ ಮುಂಜಾನೆ ಡಾನ್ ನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪೊಲೀಸರು ಆತನನ್ನು ಕರ್ನೂಲ್ ಮಂಡಲದ ಪ್ರಜಾನಗರ ನಿವಾಸಿ ಶಿವಶಂಕರ್ ಎಂದು ಗುರುತಿಸಿದ್ದಾರೆ.
ಇದನ್ನೂ ಓದಿ: 4 ಕೋಟಿ ರೂ. ಜೀವನಾಂಶ ಬೇಡಿಕೆಯ ವದಂತಿ! ಧನಶ್ರೀ ವರ್ಮಾ ಅವರನ್ನು ಟೀಕಿಸಿದ ಯುಜ್ವೇಂದ್ರ ಚಹಾಲ್.. yuzvendra chahal
ಈ ಭೀಕರ ಅಪಘಾತಕ್ಕೆ ಕಾರಣವಾದ ಖಾಸಗಿ ಟ್ರಾವೆಲ್ಸ್ ಬಸ್ ಬಗ್ಗೆ ಸಾರಿಗೆ ಇಲಾಖೆಯ ತನಿಖೆ ನಡೆಸುತ್ತಿದೆ. ಈ ಘೋರ ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ಬಗ್ಗೆ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ತನಿಖೆಯನ್ನು ನಡೆಸುತ್ತಿದೆ. ತನಿಖೆ ನಂತರವಷ್ಟೆ ಸ್ಪಷ್ಟ ಕಾರಣ ತಿಳಿಯ ಬೇಕಿದೆ. ಈ ಘಟನೆಯ ಬಗ್ಗೆ ಪೂರ್ಣ ಪ್ರಮಾಣದ ತನಿಖೆಗೆ ಆದೇಶಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸಿ ಪರಿಹಾರ ಘೋಷಿಸಿದ್ದಾರೆ.
ಬೈಕ್ ಸವಾರ ಶಿವಶಂಕರ್ ಮದ್ಯದ ಅಮಲಿನಲ್ಲಿದ್ದ. ಬೈಕ್‌ಗೆ ಡಿಕ್ಕಿ ಹೊಡೆದ ನಂತರ ಬಸ್ ಬೆಂಕಿಗೆ ಆಹುತಿಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.