ಆಗ್ರಾ: ಬೀದಿನಾಯಿಗಳನ್ನು ತುಂಬಿಕೊಂಡು ನಗರದ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್‌ನ ವ್ಯಾನ್ ಹಿಂಬದಿ ಬರುತ್ತಿದ್ದ ಬೈಕ್ ಸವಾರನೊಬ್ಬ, ವಾಹನಕ್ಕೆ ಹಾಕಲಾಗಿದ್ದ ಬೋಲ್ಟ್ನ ಬಿಚ್ಚಿ, ಶ್ವಾನಗಳು ತಪ್ಪಿಸಿಕೊಳ್ಳುವಂತೆ ಮಾಡಿದ್ದಾರೆ. ಘಟನೆಯ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದ ವ್ಯಕ್ತಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಮಹಾನಗರ ಪಾಲಿಕೆ ಹಿಡಿದಿದ್ದ ಸುಮಾರು 8-10 ನಾಯಿಗಳನ್ನು ಕಾರ್ಪೋರೇಷನ್ ವಾಹನದಲ್ಲಿ ತುಂಬಿಕೊಂಡು ಹೋಗಲಾಗುತ್ತಿತ್ತು. ಇದನ್ನು ಗಮನಿಸಿದ ಬೈಕ್ ಸವಾರನೊಬ್ಬ ಸುಮಾರು ದೂರ ವ್ಯಾನ್ ಹಿಂಬಾಲಿಸಿಕೊಂಡು ಬಂದಿದ್ದಾನೆ. ತದನಂತರ ಬೋಲ್ಟ್ ತೆಗೆದು, ಶ್ವಾನಗಳನ್ನು ತಪ್ಪಿಸಿಕೊಳ್ಳುವಂತೆ ಮಾಡಿದ್ದಾರೆ. ಈ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ನಾಯಿಗಳನ್ನು ಹೊತ್ತೊಯ್ಯುತ್ತಿದ್ದ ವಾಹನ ಆಗ್ರಾ ನಗರ ನಿಗಮ್‌ಗೆ ಸೇರಿದ್ದರಿಂದ ಆಗ್ರಾದ ಸುತ್ತಮುತ್ತ ಈ ದೃಶ್ಯವನ್ನು ಸೆರೆ ಹಿಡಿದಿರಬಹುದು ಎಂದು ಹೇಳಲಾಗಿದೆ,(ಏಜೆನ್ಸೀಸ್).