ನ್ಯೂಸ್

ಟ್ರಾ$್ಯಕ್ಟರ್​ ಡಿಕ್ಕಿಯಾಗಿ ಬೈಕ್​ ಸವಾರ ಮೃತ್ಯು

ಎನ್.ವೆಂಕಟೇಶ್

ಚಿಂತಾಮಣಿ: ನಗರದ ಹೆದ್ದಾರಿ ಎಂ.ಜಿ.ರಸ್ತೆಯಲ್ಲಿ ಟ್ರಾ$್ಯಕ್ಟರ್​ ಹಾಗೂ ಬೈಕ್​ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಚಿಕಿತ್ಸೆ ಫಲಕಾರಿಯಾಗದೆ ಕೋಲಾರ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಮೃತಪಟ್ಟಿದ್ದಾನೆ.ನಗರದ ವಿನೋಬಾ ಕಾಲನಿಯ ಮುರಳಿ (28) ಮೃತ. ಬುಧವಾರ ರಾತ್ರಿ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಬಂದ ಟ್ರಾ$್ಯಕ್ಟರ್​ ಹಿಂದಿಯಿಂದ ಡಿಕ್ಕಿಯಾಗಿದ್ದು, ಈ ವೇಳೆ ಕೆಳಕ್ಕೆ ಬಿದ್ದ ಮುರಳಿಗೆ ಗಾಯಗಳಾಗಿತ್ತು. ಚಿಂತಾಮಣಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆರ್​.ಎಲ್​.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ನಗರಠಾಣೆಯಲ್ಲಿ ದೂರು ದಾಖಲಾಗಿದೆ. ಕೋಲಾರದಲ್ಲಿ ಶವದ ಮರಣೋತ್ತರ ಪರೀೆ ನಡೆಸಿದ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಗುರುವಾರ ಸಂಜೆ ನಗರದ ಚೇಳೂರು ರಸ್ತೆಯಲ್ಲಿರುವ ಹಿಂದು ರುದ್ರ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು.