ಆಲ್ದೂರು: ರಾಮನವಮಿ ನಿಮಿತ್ತ ಬುಧವಾರ ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಶ್ರೀ ಮಹಾಗಣಪತಿಗೆ ಅರಿಶಿನ, ಕುಂಕುಮದಿಂದ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಭಕ್ತರಿಗೆ ಪಾನಕ ಹಾಗೂ ಕೋಸುಂಬರಿ ವಿತರಿಸಲಾಯಿತು. ಬಜರಂಗದಳ ಹಾಗೂ ವಿಶ್ವಹಿಂದು ಪರಿಷತ್ ಕಾರ್ಯಕರ್ತರು ಬೈಕ್ ಜಾಥಾ ಹಮ್ಮಿಕೊಂಡಿದ್ದರು. ಪಟ್ಟಣದ ಗಣಪತಿ ದೇವಸ್ಥಾನದಿಂದ ಜಾಥಾ ಆರಂಭಗೊಂಡಿತು. ತೆರೆದ ವಾಹನದಲ್ಲಿ ರಾಮನ ಬೃಹತ್ ಕಟೌಟ್‌ನೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗ ಸಾರ್ವಜನಿಕರಿಗೆ ಪಾನಕ, ಕೋಸುಂಬರಿ ವಿತರಿಸಲಾಯಿತು.