ನ್ಯೂಸ್

ಲಾಲು ಪ್ರಸಾದ್​ ಯಾದವ್​ಗೆ ಕಿಡ್ನಿ ದಾನ ಮಾಡಿದ ಮಗಳು: ಸಿಂಗಾಪುರದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿ

ಸಿಂಗಾಪುರ: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಅವರಿಗೆ ಮಗಳೇ ಕಿಡ್ನಿ ದಾನ ಮಾಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ತಂದೆಗೆ ಮರುಜೀವ ಸಿಕ್ಕಿದೆ.

ಸಿಂಗಾಪುರದ ಆಸ್ಪತ್ರೆಯಲ್ಲಿ ಲಾಲು ಪ್ರಸಾದ್​ ಯಾದವ್​ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಅವರನ್ನು ಸೋಮವಾರ ಐಸಿಯುಗೆ ಸ್ಥಳಾಂತರಿಸಲಾಯಿತು.

ಐಸಿಯು ವಾರ್ಡ್​ಗೆ ಲಾಲು ಪ್ರಸಾದ್​ ಅವರನ್ನು ವೈದ್ಯರು ಆಪರೇಷನ್ ಥಿಯೇಟರ್‌ನಿಂದ ಸ್ಥಳಾಂತರಿಸುವ ದೃಶ್ಯವನ್ನು ಟ್ವೀಟ್​ ಮೂಲಕ ಶೇರ್​ ಮಾಡಿಕೊಂಡಿರುವ ಅವರ ಪುತ್ರ, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ತಂದೆಗೆ ಕಿಡ್ನಿ ದಾನ ಮಾಡಿದ ನನ್ನ ಸಹೋದರಿ ರೋಹಿಣಿ ಆಚಾರ್ಯ ಮತ್ತು ಕಿಡ್ನಿ ಕಸಿ ಮಾಡಿಸಿಕೊಂಡ ತಂದೆ ಇಬ್ಬರೂ ಆರೋಗ್ಯವಾಗಿದ್ದಾರೆ. ನಿಮ್ಮ ಪ್ರಾರ್ಥನೆ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.