ಬಿಹಾರ: ಆಕೆ ಮದುವೆಯಾಗಿ ತಿಂಗಳು ಕಳೆದಯುತ್ತಿದ್ದಂತೆ, ಅನಾರೋಗ್ಯದ ಕಾರಣ ಮುಂದಿಟ್ಟು ತವರು ಮನೆ ಸೇರಿದ್ದಳು. ಹೀಗಾಗಿ ಗಂಡನೂ ಸುಮ್ಮನಾಗಿದ್ದ. ಆದರೆ ವರ್ಷ ಕಳೆದರೂ ಪತ್ನಿ ಮನೆಗೆ ಬರದಿರುವುದರಿಂದ ಅನುಮಾನು ಬಂದು, ನೇರವಾಗಿ ಆಕೆಯ ಮನೆಗೆ ತೆರಳಿದ್ದಾನೆ. ಈ ವೇಳೆ ಸತ್ಯ ಗೊತ್ತಾಗುತ್ತಿದ್ದಂತೆ, ಅಲ್ಲಿಂದ ಆತ ಹೋಗಿದ್ದು ಪೊಲೀಸ್ ಠಾಣೆಗೆ!
ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಛೋಟು ಕುಮಾರ್ 2020ರಲ್ಲಿ ಬಿಹಾರದ ಕೈಮೂರ್ ಜಿಲ್ಲೆಯ ಯುವತಿಯೊಂದಿಗೆ ಮದುವೆಯಾಗಿದ್ದ. ವಿವಾಹವಾಗಿ ಒಂದು ತಿಂಗಳು ಕಳೆಯುತ್ತಿದ್ದಂತೆ ಅನಾರೋಗ್ಯ ಎಂದು ಪತ್ನಿ, ಆಭರಣ ಸಮೇತ ತವರು ಮನೆ ಸೇರಿದ್ದಳು. ಎಷ್ಟು ಸಮಯ ಕಳೆದರೂ ಆಕೆ ಮಾತ್ರ ಗಂಡನ ಮನೆಗೆ ಹಿಂತಿರುಗಿಲ್ಲ.
ಅನಾರೋಗ್ಯವೆಂದು ತವರು ಮನೆಗೆ ಹೋಗಿದ್ದ ಪತ್ನಿ ಹುಡುಕಿಕೊಂಡು ಛೋಟು ಕುಮಾರ್, ಆಕೆಯ ಮನೆಗೆ ಹೋಗಿದ್ದಾನೆ. ಈ ವೇಳೆ ಸತ್ಯ ಸಂಗತಿ ಬಯಲಾಗಿದ್ದು, ಮಂತ್ರವಾದಿಯೊಬ್ಬನೊಂದಿಗೆ ಪತ್ನಿ ಓಡಿ ಹೋಗಿರುವುದಾಗಿ ಗೊತ್ತಾಗಿದೆ. ಕೂಡಲೇ ಆತ ಭಬುವಾ ಪೊಲೀಸ್ ಠಾಣೆಗೆ ಬಂದು, ಪತ್ನಿ ಹಾಗೂ ಆರೋಪಿ ಓಜಾ ಎಂಬಾತನ ವಿರುದ್ಧ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರ ಪತ್ತೆಗೆ ಬಲೆ ಬೀಸಿದ್ದಾರೆ.
ತವರು ಮನೆ ಸೇರಿದ್ದ ಪತ್ನಿಗೆ ಮಂತ್ರವಾದಿ ಓಜಾ ಎಂಬಾತನ ಪರಿಚಯವಾಗಿದೆ. ಆಕೆ ಆತನೊಂದಿಗೆ ಓಡಿ ಹೋಗಿರುವ ಸಂಗತಿಯನ್ನು ಪತ್ನಿಯ ಮನೆಯವರು ಇಷ್ಟು ಸಮಯ ನನ್ನಿಂದ ಮುಚ್ಚಿಟ್ಟಿದ್ದರು. ನಾನು ಬಂದು ಪರಿಶೀಲಿಸಿದಾಗ ಮಗಳು ಓಡಿ ಹೋಗಿದ್ದಾಳೆ. ಇನ್ನು ನೀನು ಮುಂದೆ ಸಂತೋಷವಾಗಿರು ಎಂದು ಅತ್ತೆ ತಿಳಿಸಿರುವುದಾಗಿ ಛೋಟು ಕುಮಾರ್ ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ.
ಛೋಟು ಕುಮಾರ್ ನೀಡಿರುವ ಮಾಹಿತಿ ಆಧಾರದಲ್ಲಿ ಭಭುವಾ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ನಂತರವಷ್ಟೇ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲಾಗುವುದು ಎಂದು ಭಭುವಾ ಡಿಎಸ್‌ಪಿ ಶಿವಶಂಕರ್ ಕುಮಾರ್ ತಿಳಿಸಿದ್ದಾರೆ.