ನ್ಯೂಸ್

ಬಿಹಾರ ಚುನಾವಣೆಗೆ ಒಂದು ದಿನ ಬಾಕಿ; ಮ. 12ಕ್ಕೆ ಸುದ್ದಿಗೋಷ್ಠಿ ಕರೆದ Rahul Gandhi; ಮತಗಳ್ಳತನದ ಹೈಡ್ರೋಜನ್ ಬಾಂಬ್​ ಬಿಡುಗಡೆ ಸಾಧ್ಯತೆ

ನವದೆಹಲಿ: ದೇಶದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಭಾರತೀಯ ಚುನಾವಣೆ ಆಯೋಗದ ಸಹಕಾರದಿಂದ ಬಿಜೆಪಿ ಮತಗಳ್ಳತನದಲ್ಲಿ ತೊಡಗಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi), ಈ ಬಗ್ಗೆ ಶೀಘ್ರದಲ್ಲೇ ಹೈಡ್ರೋಜನ್ ಬಾಂಬ್​ನಂತಹ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು.

ನಾಳೆ ಬಿಹಾರ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯುವ ಒಂದು ದಿನದ ಮುಂಚೆ, ಇಂದು ಮಧ್ಯಾಹ್ನ 12 ಗಂಟೆ ಎಐಸಿಸಿ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ ಕರೆದಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ಶೀಘ್ರದಲ್ಲೇ ಹೈಡ್ರೋಜನ್ ಬಾಂಬ್ ಸ್ಫೋಟಗೊಳ್ಳಲಿದೆ, ಲೋಡಿಂಗ್ ಎಂದು ದಾಖಲೆಯ ಕಟ್ಟಿನ ಫೋಟೋವನ್ನು ಶೇರ್ ಮಾಡಿದೆ. ಇದು ಬಿಜೆಪಿ ವಿರುದ್ಧ ಅವರು ಮಾಡಿರುವ ಮತಗಳ್ಳತನ ಆರೋಪದ ದಾಖಲೆ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)