ನ್ಯೂಸ್

ಬಾಗಿಲು ತೆರೆದಿದೆ, ಒಳಗೆ ಬರಬೇಕಷ್ಟೇ! ಮೈತ್ರಿ ಮುನ್ಸೂಚನೆ ಕೊಟ್ಟ ಲಾಲು? ಓಪನ್ ಆಫರ್​ಗೆ ನಿತೀಶ್​​ ಪ್ರತಿಕ್ರಿಯೆ​ | Lalu

ಪಾಟ್ನಾ: ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಜನತಾ ದಳ ಮುಖ್ಯಸ್ಥರಾದ ಲಾಲು ಪ್ರಸಾದ್ ಯಾದವ್​ (Lalu Prasad Yadav)​ ನೀಡಿರುವ ಹೇಳಿಕೆ ಇದೀಗ ಬಿಹಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನೇ ಹುಟ್ಟುಹಾಕಿದೆ.

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, "ನಮ್ಮ ಬಾಗಿಲು ತೆರೆದಿದೆ. ನಿತೀಶ್​ ತಾವು ಹಾಕಿಕೊಂಡಿರುವ ಬೋಲ್ಟ್​ ತೆಗೆದು ಬರಬೇಕು ಅಷ್ಟೇ" ಎಂದು ಮೈತ್ರಿ ಮಾಡಿಕೊಳ್ಳುವ ಆಫರ್​ ನೀಡಿದ್ದಾರೆ. ಸದ್ಯ ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪ್ರತಿಪಕ್ಷ ನಾಯಕನ ಆಹ್ವಾನದ ಮೇರೆಗೆ ಮತ್ತೆ ಆರ್​ಜೆಡಿ ಜತೆ ನಿತೀಶ್​ ಕೈಜೋಡಿಸಲಿದ್ದಾರೆಯೇ ಎಂಬ ಪ್ರಶ್ನೆಗಳು ಭುಗಿಲೆದ್ದಿವೆ. ಲಾಲು ಹೇಳಿಕೆಯನ್ನು ಮುಂದಿಟ್ಟ ಪತ್ರಕರ್ತರಿಗೆ ಉತ್ತರಿಸಿದ ಸಿಎಂ, "ಏನು ಹೇಳುತ್ತಿದ್ದೀರಿ ನೀವು" ಎಂದು ಪ್ರತಿಕ್ರಿಯಿಸಿದ್ದಾರೆ.

ಲಾಲು ಪ್ರಸಾದ್​ ಹೇಳಿಕೆಗೆ ಹೆಚ್ಚು ತುಟಿ ಬಿಚ್ಚದ ನಿತೀಶ್ ಕುಮಾರ್​, ಕೇವಲ ಮೂರೇ ಮೂರು ಪದಗಳಲ್ಲಿ ಉತ್ತರಿಸಿ, ಸ್ಥಳದಿಂದ ಹೊರಟು ಹೋಗಿದ್ದಾರೆ. ಒಂದೆಡೆ ಲಾಲು ಪ್ರಸಾದ್ ಯಾದವ್​ ನೀಡಿರುವ ಆಹ್ವಾನ ಬಿಹಾರದಲ್ಲಿ ಹೊಸ ಸರ್ಕಾರ ಸೃಷ್ಟಿಯಾಗುವ ಮುನ್ಸೂಚನೆ ನೀಡಿದೆಯೇ? ಲಾಲು-ನಿತೀಶ್​ರ ಮೈತ್ರಿಗೆ ಚಾಲನೆ ಸಿಗಲಿದೆಯೇ? ಎಂಬುದು ಸದ್ಯ ಅನೇಕರಲ್ಲಿ ಬೆಂಬಿಡದೆ ಕಾಡುತ್ತಿರುವ ಪ್ರಶ್ನೆಯಾಗಿದೆ,(ಏಜೆನ್ಸೀಸ್).