ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಉದ್ಘಾಟನಾ ಕಾರ್ಯಕ್ರಮವೊಂದರಲ್ಲಿ ಜಾರಿಬಿದ್ದ ಘಟನೆ ಮಂಗಳವಾರ ನಡೆದಿದೆ. ಆದರೆ ತಕ್ಷಣವೇ ಭದ್ರತಾ ಸಿಬ್ಬಂದಿ ಅವರ ಕೈ ಹಿಡಿದುಕೊಂಡಿದ್ದಾರೆ. ಸದ್ಯ ಮುಖ್ಯಮಂತ್ರಿಗಳಿಗೆ ಯಾವುದೇ ಗಂಭೀರ ಪೆಟ್ಟಾಗಿಲ್ಲ. ಈ ಘಟನೆಯ ನಂತರ ಸಿಎಂ ನಿತೀಶ್ ಕುಮಾರ್ ಕೂಡ ನಗುತ್ತಲೇ ಕಾಣಿಸಿಕೊಂಡರು.
ಘಟನೆಯ ವಿವರ
ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಪಾಟ್ನಾ ವಿಶ್ವವಿದ್ಯಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಈ ವೇಳೆ ಅವರು ಫಲಕ ಅನಾವರಣಗೊಳಿಸಿದರು. ಅವರೊಂದಿಗೆ ಭದ್ರತಾ ಸಿಬ್ಬಂದಿಯೂ ಇದ್ದರು.
ಶಿಲಾಫಲಕ ಅನಾವರಣ ಮಾಡುವ ವೇಳೆ ...
ಶಿಲಾಫಲಕ ಅನಾವರಣಗೊಳಿಸಲು ಸಿಎಂ ಕಲ್ಲು ಚಪ್ಪಡಿಯ ಒಂದು ಬದಿಯ ಸಮೀಪ ಬಂದ ತಕ್ಷಣ ಕಾಲು ಜಾರಿ ಬಿದ್ದಿದ್ದಾರೆ. ಮುಖ್ಯಮಂತ್ರಿಗಳು ಆ ಸ್ಥಿತಿಯಲ್ಲಿದ್ದುದನ್ನು ಕಂಡ ಭದ್ರತಾ ಸಿಬ್ಬಂದಿ ತಕ್ಷಣ ಅವರ ಕೈ ಹಿಡಿದು ಎತ್ತಿದ್ದಾರೆ. ಭದ್ರತಾ ಸಿಬ್ಬಂದಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸುರಕ್ಷಿತವಾಗಿ ಎತ್ತಿಕೊಂಡ ನಂತರ, ಸಿಎಂ ನಗುತ್ತಿದ್ದರು. ತನಗೆ ಪೆಟ್ಟಾಗಲಿಲ್ಲ ಎಂದು ಹೇಳಿದರು.
ವಿಡಿಯೋ ವೈರಲ್
ವಿಶೇಷವೆಂದರೆ ಈ ವೇಳೆ ಹಲವು ಮಾಧ್ಯಮದವರೂ ಅಲ್ಲಿದ್ದರು. ಈ ದೃಶ್ಯವನ್ನು ಮಾಧ್ಯಮದವರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಈ ಘಟನೆಯ ವಿಡಿಯೋ ಕೂಡ ಅಂತರ್ಜಾಲ ಮಾಧ್ಯಮಗಳಲ್ಲಿ ವೈರಲ್ ಆಗಿದೆ.