ನವದೆಹಲಿ: ಸಿಗ್ಮಾ ಗ್ಯಾಂಗ್‌ಗೆ ಸೇರಿದ ನಾಲ್ವರು ಮೋಸ್ಟ್ ವಾಂಟೆಡ್ ದರೋಡೆಕೋರರನ್ನು (Gangsters) ಪೊಲೀಸರು ಎನ್ಕೌಂಟರ್ ಮಾಡಿರುವ ಘಟನೆ ದೆಹಲಿಯಲ್ಲಿ ಗುರುವಾರ ಬೆಳಗಿನ ಜಾವ ಅ.(23) ನಡೆದಿದೆ
ಬಿಹಾರದ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಮುಖ ಪಿತೂರಿ ರೂಪಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ದೆಹಲಿ ಮತ್ತು ಬಿಹಾರ ಪೊಲೀಸ್ ತಂಡಗಳು ಗುರುವಾರ ಮಧ್ಯರಾತ್ರಿ 2.20 ಕ್ಕೆ ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ದೀಪಾವಳಿ ಮುಗಿಯುತ್ತಿದ್ದಂತೆ ಕುಸಿದ ಚಿನ್ನ! ಖರೀದಿದಾರರಿಗೆ ಇದು ಸೂಕ್ತ ಸಮಯವೇ? ಹೀಗಿದೆ ನೋಡಿ ಇಂದಿನ ದರ | Gold Rates
ಗ್ಯಾಂಗ್ ಸದಸ್ಯರು ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದರು, ಈ ವೇಳೆ ಎನ್ಕೌಂಟರ್ ನಡೆದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಈ ವೇಳೆ ನಾಲ್ವರು ಆರೋಪಿಗಳಿಗೂ ಗುಂಡೇಟಿನಿಂದ ಗಾಯಗಳಾಗಿದ್ದು, ಅವರನ್ನು ರೋಹಿಣಿ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರೆಲ್ಲಾ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ದರೋಡೆಕೋರರನ್ನು ರಂಜನ್ ಪಾಠಕ್ (25), ಬಿಮ್ಲೇಶ್ ಮಹ್ತೊ (25 ), ಮನೀಶ್ ಪಾಠಕ್ (33 ) ಮತ್ತು ಅಮನ್ ಠಾಕೂರ್ (21 ) ಎಂದು ಗುರುತಿಸಲಾಗಿದೆ. ರಂಜನ್ ಪಾಠಕ್ ಗ್ಯಾಂಗ್ನ ನಾಯಕ ಎಂದು ಗುರುತಿಸಿದ್ದಾರೆ.
ಈ ನಾಲ್ವರು ಆರೋಪಿಗಳು ಬಿಹಾರದಲ್ಲಿ ಕೊಲೆ, ಸುಲಿಗೆ ಮತ್ತು ಸಂಘಟಿತ ಅಪರಾಧ ಚಟುವಟಿಕೆಗಳು ಸೇರಿದಂತೆ ಹಲವಾರು ಘೋರ ಅಪರಾಧಗಳಲ್ಲಿ ಬೇಕಾಗಿದ್ದರು ಎಂದು ದೆಹಲಿ ಪೊಲೀಸ್ ಮೂಲಗಳು ದೃಢಪಡಿಸಿವೆ.
ಇದನ್ನೂ ಓದಿ: SIR | ನವೆಂಬರ್ ಮೊದಲ ವಾರದಿಂದ ರಾಷ್ಟ್ರವ್ಯಾಪಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭ ಸಾಧ್ಯತೆ!
ಪಾಠಕ್ ಸಾಮಾಜಿಕ ಮಾಧ್ಯಮ ಮತ್ತು ಆಡಿಯೊ ಸಂದೇಶಗಳ ಮೂಲಕ ಪೊಲೀಸರಿಗೆ ಬಹಿರಂಗವಾಗಿ ಸವಾಲು ಹಾಕುತ್ತಿದ್ದ ಎಂದು ದೆಹಲಿ ಪೊಲೀಸ್ ಮೂಲವೊಂದು ಬಹಿರಂಗಪಡಿಸಿದೆ. ಇತ್ತೀಚೆಗೆ ಪತ್ತೆಯಾಗಿರುವ ಆಡಿಯೊ ಕ್ಲಿಪ್ ಬಿಹಾರ ಚುನಾವಣೆಗೆ ಮುನ್ನ ಗ್ಯಾಂಗ್ ರೂಪಿಸುತ್ತಿದ್ದ ಪ್ರಮುಖ ಪಿತೂರಿಯ ವಿವರಗಳನ್ನು ಬಹಿರಂಗಪಡಿಸಿದೆ ಎಂದು ಮಾಹಿತಿ ಬಂದಿದೆ.
ಸಿಗ್ಮಾ ಗ್ಯಾಂಗ್ ಸುಮಾರು 7 ವರ್ಷಗಳಿಂದ ಸಕ್ರಿಯವಾಗಿದ್ದು, ಬಿಹಾರದಲ್ಲಿ ಪೊಲೀಸ್ ಕ್ರಮದಿಂದ ತಪ್ಪಿಸಿಕೊಳ್ಳಲು ದೆಹಲಿಯಲ್ಲಿ ಮತ್ತೆ ಗುಂಪುಗೂಡುತ್ತಿತ್ತು ಎಂದು ವರದಿಯಾಗಿದೆ. ಕಾರ್ಯಾಚರಣೆಗೆ ಮುನ್ನ ಪೊಲೀಸರು ಹಲವಾರು ದಿನಗಳವರೆಗೆ ಅವರ ಚಲನವಲನಗಳನ್ನು ಗಮನಿಸುತ್ತಿದ್ದರು. ಎನ್ಕೌಂಟರ್ ನಂತರ, ಪ್ರದೇಶವನ್ನು ಸುತ್ತುವರಿಯಲಾಗಿದ್ದು, ಸಾಕ್ಷ್ಯ ಸಂಗ್ರಹಿಸಲು ವಿಧಿವಿಜ್ಞಾನ ತಂಡಗಳನ್ನು ಕರೆಹಿಸಲಾಗಿದೆ. (ಏಜೆನ್ಸೀಸ್)