ಬಿಗ್ಬಾಸ್ ಮನೆಯಲ್ಲಿ ದಿನ ಕಳೆದಂತೆ ಸ್ಪರ್ಧಿಗಳ ನಡುವಿನ ಪೈಪೋಟಿ ಮತ್ತಷ್ಟು ಹೆಚ್ಚಾಗುತ್ತಿದೆ. ಅಂತೆಯೇ ಸ್ಫರ್ಧಿಗಳ ನಡುವಿನ ಪೈಪೋಟಿಯೂ ಮತ್ತೊಂದು ಹಂತ ತಲುಪಿದೆ. ಇದೀಗ ಬಿಗ್ಬಾಸ್ ಮನೆಯ ಸ್ಪರ್ಧಿಯೊಬ್ಬರು ಪ್ರೆಗ್ನೆಂಟ್ ಎಂಬ ಶಾಕಿಂಗ್ ವಿಚಾರ ಹೊರಬಿದ್ದಿದೆ.
ಹೌದು ಹಿಂದಿ ಬಿಗ್ಬಾಸ್ಗೆ ಹದಿನೇಳನೇ ಸೀಸನ್ ಸೆಪ್ಟೆಂಬರ್ 3 ರಂದು ಪ್ರಾರಂಭವಾಯಿತು. ಈ ಸೀಸನ್‌ಗೂ ಸಲ್ಮಾನ್ ಖಾನ್ ಹೋಸ್ಟ್ ಮಾಡುತ್ತಿದ್ದಾರೆ. ಸದ್ಯ ಇದೇ ಸೀಸನ್‌ನ ಸ್ಪರ್ಧಿಯೊಬ್ಬರ ಕುರಿತು ಶಾಕಿಂಗ್ ಸತ್ಯ ಹೊರಬಿದ್ದಿದೆ.
ಹಿಂದಿ ನಟಿ ಅಂಕಿತಾ ಲೋಖಂಡೆ ಈ ಸೀಸನ್ ನಲ್ಲಿ ತಮ್ಮ ಪತಿ ವಿಕ್ಕಿ ಜೈನ್ ಅವರೊಂದಿಗೆ ಬಿಗ್ ಬಾಸ್ ಶೋಗೆ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ಆದರೆ ಅಂಕಿತಾ ಇತ್ತೀಚಿಗೆ ತನಗೆ ಹುಷಾರಿಲ್ಲ ಎಂದು ತನ್ನ ಪತಿಗೆ ಹೇಳಿದ್ದಾಳೆ.
ಹಿಂದಿ ಸೀರಿಯಲ್ಗಳ ಪೈಕಿ ಪವಿತ್ರ್ ರಿಶ್ತಾ ಎಂಬ ಸೀರಿಯಲ್ ಮೂಲಕ ನಟಿ ಅಂಕಿತಾ ಲೋಖಂಡೆ ತುಂಬಾನೇ ಫೇಮಸ್. ಅಂಕಿತಾ ತಮಗೆ ಪಿರಿಯಡ್ಸ್ ಆಗಿಲ್ಲ ಮತ್ತು ಮನೆಗೆ ಹೋಗಬೇಕೆಂದು ಹೇಳಿದ್ದು.. ತಾನು ಗರ್ಭಿಣಿಯೇ ಎಂದು ತಿಳಿಯಲು ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ಸದ್ಯದಲ್ಲೇ ಗುಡ್ ನ್ಯೂಸ್ ಬರಲಿದೆ.. ಎಂದು ಹಿಂದಿ ಬಿಗ್ ಬಾಸ್ ಪ್ರೇಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.
ಸದ್ಯ ಅಂಕಿತಾ ಮನೆಯಲ್ಲೇ ಉಳಿಸುಕೊಳ್ತಾರಾ ಅಥವಾ ಮನೆಗೆ ಹೋಗ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ಇನ್ನು ಬಿಗ್ಬಾಸ್ ಮನೆಯಲ್ಲಿ ನಟಿ ಗರ್ಭಿಣಿಯಾಗಿದ್ದಾರೆಯೇ ಅನ್ನೋದು ಸದ್ಯ ಜನರ ಪ್ರಶ್ನೆಯಾಗಿದ್ದು, ಮುಂದಿನ ವಾರ ಈ ಬಗ್ಗೆ ಅಂಕಿತಾ ಏನಾದರೂ ನಿರ್ಧಾರಗಳನ್ನ ಕೈಗೊಳ್ಳಲಿದ್ದಾರೆಯೇ ಅನ್ನೋದನ್ನ ಕಾದು ನೋಡಬೇಕಿದೆ.