ನ್ಯೂಸ್

ʼಡ್ರೋನ್‌ ಪ್ರತಾಪ್‌ ಹುಡುಗಿಯರನ್ನು ಕೆಟ್ಟ ದೃಷ್ಟಿಯಲ್ಲಿ ನೋಡ್ತಾನೆ' : ವಿನಯ್​​​ ಗೌಡ ಗಂಭೀರ ಆರೋಪ

ಬಿಗ್‌ಬಾಸ್‌ ಮನೆಯಲ್ಲಿ ತುಕಾಲಿ ಸಂತು, ಸ್ನೇಹಿತ್ ಗೌಡ, ಇಶಾನಿ ಹಾಗೂ ನಮ್ರತಾ ಜೊತೆಗೆ ವಿನಯ್ ಗೌಡ ಮಾತನಾಡುತ್ತಿದ್ದರು. ಈ ವೇಳೆ ಡ್ರೋನ್ ಪ್ರತಾಪ್ ಬಗ್ಗೆ ಮಾತಾಗಿದ್ದು ಸದಸ್ಯರ ವಿನಯ್‌ ಗೌಡ ಬಿಗ್‌ಬಾಸ್‌ ಮನೆಯಲ್ಲಿ ಇತ್ತೀಚೆಗೆ ಡ್ರೋನ್ ಪ್ರತಾಪ್ ಮಹಿಳಾ ಸ್ಪರ್ಧಿಗಳನ್ನು ಕೆಟ್ಟ ದೃಷ್ಟಿಯಲ್ಲಿ ನೋಡಿದ್ದಾನೆಂದು ಹೇಳಿದ್ದು, "ಕೆಟ್ಟ ಲುಕ್‌ನಲ್ಲಿ ನೋಡ್ತಾನೆ" ಅಂತ ಡ್ರೋನ್ ಪ್ರತಾಪ್ ಬಗ್ಗೆ ವಿನಯ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.


ಆದ್ರೆ ಪ್ರತಾಪ್​ ಈವರೆಗೂ ಎಲ್ಲಾ ಮಹಿಳಾ ಸ್ಪರ್ಧಿಗಳನ್ನ ದೀದಿ ಹಾಗು ಪುರುಷ ಸ್ಪರ್ಧಿಗಳನ್ನ ಅಣ್ಣ ಎಂದೇ ಕರೆದಿದ್ದಾರೆ.


ಡ್ರೋನ್​ ಬಗ್ಗೆ ಮಾಡಿದ ಈ ಆರೋಪಕ್ಕೆ ವಿಶ್ಲೇಷಣೆ ನೀಡೋಕೆ ಮುಂದಾದ ಪ್ರತಾಪ್​​, ಅವನು ಹೆಂಗ್ ನೋಡ್ತಾನೆ ಅಂದ್ರೆ. ಕೆಟ್ಟದಾಗಿ ನೋಡ್ತಾನೆ. ಅವನು ಯಾವತ್ತಾದರೂ ನೋಡುವಾಗ ನಾನು ತೋರಿಸ್ತೀನಿ ನೋಡಿ… ತುಂಬಾ ಕೆಟ್ಟದಾಗಿ ನೋಡ್ತಾನೆ ಅವನು. ಆ ರಿಯಾಕ್ಷನ್ ಇದ್ದದ್ದು ನೀವು ಡ್ಯಾನ್ಸ್ ಆಡುವಾಗ.. ಅದೊಂದು ಕೆಟ್ಟ ಲುಕ್ ಇದೆ. ಒಬ್ಬ ಮನುಷ್ಯನ ಲುಕ್ ಮೇಲೆ ಗೊತ್ತಾಗುತ್ತೆ ಅಲ್ವಾ..? ಮೊನ್ನೆ ಇಲ್ಲೇ ಒಂದ್ ಸೀನ್ ಆಯ್ತು. ನನ್ನ ಮುಂದೆ ಯಾರೋ ಏನೋ ಸರಿ ಮಾಡಿಕೊಳ್ಳುತ್ತಿದ್ದರು. ನಾನು ನೋಡಿ ತಿರುಗಿದೆ. ಪಕ್ಕದಲ್ಲಿ ನೋಡ್ತಿದ್ದ'' ಎಂದಿದ್ದಾರೆ ವಿನಯ್​ ಗೌಡ.


ವಿನಯ್ ಗೌಡ ಡ್ರೋನ್​​ ಪ್ರತಾಪ್​​ ಮೇಲೆ ಮಾಡಿರುವಂತಹ ಆರೋಪ ಗಂಭೀರವಾಗಿದ್ದು, ‘ಬಿಗ್ ಬಾಸ್’ ಮನೆಯ ಮೂಲೆ ಮೂಲೆಯಲ್ಲೂ ಇರುವ ಕ್ಯಾಮರಾಗಳು ಸೆರೆಹಿಡಿದಿರಲೇಬೇಕು.


ಈ ಬಗ್ಗೆ ಕಿಚ್ಚ ಸುದೀಪ್ ವಾರಾಂತ್ಯದ ಸಂಚಿಕೆಯಲ್ಲಿ ಮಾತನಾಡುತ್ತಾರೆಯೇ? ಅಥವಾ ವಿನಯ್​​​ಗೆ ಕ್ಲಾಸ್​​​ ತೆಗೆದುಕೊಳ್ತಾರ ಕಾದು ನೋಡಬೇಕಿದೆ.
ಒಟ್ಟಾರೆಯಾಗಿ ಬಿಗ್‌ಬಾಸ್‌ ಮನೆಯಲ್ಲಿ ನಾಲ್ಕನೇ ವಾರ ವಿನಯ್ ಗೌಡ ಡ್ರೋನ್‌ ಪ್ರತಾಪ್‌ ಮೇಲೆ ಗಂಭೀರ ಆರೋಪ ಮಾಡಿದ್ದು,"ಮಹಿಳಾ ಸ್ಪರ್ಧಿಗಳನ್ನ ಡ್ರೋನ್ ಪ್ರತಾಪ್ ಕೆಟ್ಟ ದೃಷ್ಟಿಯಲ್ಲಿ ನೋಡ್ತಾನೆ" ಅಂತ ಮನೆಯ ಸದಸ್ಯರ ಮುಂದೆ ಹೇಳಿದ್ದಾರೆ.