ನ್ಯೂಸ್

ಮನೆಯ ಟಾಸ್ಕ್‌ನಲ್ಲಿ ಸಿರಿಯನ್ನು ತಳ್ಳಿದ ಸ್ನೇಹಿತ್; ಬುದ್ಧಿವಂತಿಕೆಯಿಂದ ಸಿರಿಯನ್ನ ಸೇವ್​​ ಮಾಡಿದ ಪ್ರತಾಪ್​..!

ಬಿಗ್​​ ಬಾಸ್​​ ಮನೆಯಲ್ಲಿ ಈಗಾಗಲೇ ಸ್ಪರ್ಧಿಗಳು 50 ದಿನಗಳನ್ನ ಪೂರೈಸಿದ್ದು, ಸ್ಪರ್ಧಿಗಳೆಲ್ಲರೂ ಫಿನಾಲೆ ತಲುಪಲೇಬೇಕು ಎಂಬ ಜಿದ್ದಿಗೆ ಇಳಿದಿದ್ದಾರೆ. ಅದಕ್ಕಾಗಿ ಹಸರಸಾಹಸ ಪಡುತ್ತಿದ್ದಾರೆ.


ನ್ನೆ ಬಿಗ್‌ಬಾಸ್ ಮನೆಯೊಳಗೆ ಬೆಳಗ್ಗೆನೇ ಕೇಕ್ ತಿಂದು ರಸಪ್ರಶ್ನೆ ಆಟದ ಟಾಸ್ಕ್ ಅನ್ನು ನೀಡಲಾಗಿದ್ದು, ಅದರಲ್ಲಿ ಮೈಕಲ್ ಕನ್ನಡದಲ್ಲಿಯೇ ಮಾತಾಡಿ ಬಿಗ್‌ಬಾಸ್ ಮನೆಯ ಸದಸ್ಯರನ್ನು ಹಾಗೂ ವೀಕ್ಷಕರ ಗಮನವನ್ನು ಸೆಳೆದಿದ್ದರು.


ಆದರೆ, ಎರಡನೇ ಟಾಸ್ಕ್ ಮಾತ್ರ ಸಖತ್ ಚಾಲೆಂಜಿಂಗ್ ಆಗಿತ್ತು.ಬಿಗ್ ಬಾಸ್ ಮನೆಯೊಳಗಿರುವ ಸದಸ್ಯರನ್ನು ಎರಡು ಗುಂಪುಗಳನ್ನಾಗಿ ಮಾಡಲಾಗಿದ್ದು, ಬಳಿಕ ಅವರ ಕಾಲಿಗೆ ಹಗ್ಗ ಕಟ್ಟಿ ಬಾಲ್ ಅನ್ನು ನಂಬರ್ ಇರುವ ಜಾಗಕ್ಕೆ ಹಾಕಲಾಗಿತ್ತು. ಎರಡೂ ಗುಂಪಿನ ಸದಸ್ಯರು ಜಿಗಿಯುತ್ತ ಓಡಿಹೋಗಿ ಬಿಗ್‌ಬಾಸ್ ಸೂಚಿಸಿದ ನಂಬರ್ ಇರುವ ಜಾಗಕ್ಕೆ ಬಾಲ್‌ ಎತ್ತಿಕೊಂಡು ಹಾಕಬೇಕು. ಯಾವ ತಂಡದವರು ಹೆಚ್ಚು ಬಾಲ್‌ಗಳನ್ನು ಹಾಕುತ್ತಾರೋ ಆ ತಂಡ ಗೆದ್ದಂತೆ. ಆದರೆ ಈ ಟಾಸ್ಕ್ ಸ್ಪರ್ಧಿಗಳ ಜಿದ್ದಾಜಿದ್ದಿಗೆ ಕಾರಣವಾಗಿದೆ.


ಎರಡೂ ತಂಡದ ಆಟಗಾರರೂ ಜಿದ್ದಾಜಿದ್ದಿಗೆ ಬಿದ್ದು ಆಟವಾಡಿ, ಶತಯಾಗತಾಯ ಬಾಲನ್ನು ಕಸಿದುಕೊಂಡು ಜಾಲರಿಗೆ ಹಾಕಲು ಒದ್ದಾಡುತ್ತಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಆ ವೇಳೆ ಸಿರಿಯನ್ನು ಎದುರಾಳಿ ತಂಡದ ಸದಸ್ಯ ಸ್ನೇಹಿತ್ ತಳ್ಳಿದ್ದರಿಂದ ಬಿದ್ದಿದ್ದಾರೆ.


ಸಿರಿ ಬೀಳುತ್ತಿದ್ದಂತೆ ಸ್ನೇಹಿತ್ ಮೇಲೆ ಎಗರಾಡಿ, "ಇಷ್ಟೊಂದು ಫಿಜಿಕಲ್ ಆಗುವುದು ಬೇಕಾ?" ಎಂದು ಪ್ರಶ್ನಿಸಿದ್ದಾರೆ. ಸದ್ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ತಿಕ್ ಎರಡೂ ತಂಡದ ಸದಸ್ಯರನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ. ಆದರೆ ಅದು ಅಷ್ಟು ಸುಲಭವಲ್ಲ.


ಇತ್ತ ಪ್ರತಾಪ್ ಮೈಂಡ್ ಗೇಮ್ ಆಗಿ ಸಿರಿಯನ್ನು ಬಚಾವ್ ಮಾಡುತ್ತಿದ್ದಾರೆ ಅನ್ನೋ ಆರೋಪ ಬೇರೆಯಿದ್ದು, ಹೀಗಾಗಿ ಸ್ನೇಹಿತ್ ಪೈಪೋಟಿಗೆ ಬಿದ್ದು ಆಡುವ ಜೋಷ್‌ನಲ್ಲಿ ಸಿರಿಯನ್ನು ತಳ್ಳಿದ್ದಾರೆಂಬ ಆರೋಪ ಕೇಳಿಬರುತ್ತಿದೆ.
ಪುರುಷರು ಬಸ್​​​​ಗಳಲ್ಲಿ ಕಾಟ ಕೊಟ್ರೆ ಈ ಬಟನ್​​ ಪ್ರೆಸ್​​ ಮಾಡಿ..!