ಹಿಂದಿ ಬಿಗ್ ಬಾಸ್ ಸೀಸನ್ 17ನ ವಿಚಾರ. ಹೌದು… ಬಿಗ್ ಬಾಸ್ 17 ಸ್ಪರ್ಧೆ ಜೋರಾಗಿದೆ. ದಿನದಿಂದ ದಿನಕ್ಕೆ ಸ್ಪರ್ಧಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಮನೆಯಿಂದ ಹೊರಬಂದ ತಕ್ಷಣ ಸ್ಪರ್ಧಿಗಳು ಶಾಕಿಂಗ್ ವಿಚಾರಗಳನ್ನು ಬಾಯ್ಬಿಡುತ್ತಿದ್ದಾರೆ. ಇದೀಗ ಹೊಸ ವಿಚಾರವೊಂದು ಬಯಲಾಗಿದೆ.
ಯಸ್ ಕೆಲ ದಿನಗಳ ಹಿಂದಷ್ಟೇ ಬಿಗ್ ಬಾಸ್ ಮನೆಯಲ್ಲಿ ಅಂಕಿತಾ ನಾನು ಪ್ರೆಂಗ್ನೆಂಟ್ ಆಗಿರಬಹುದು ಎಂದು ಹೇಳಿಕೊಂಡಿದ್ದರು, ಬಿಗ್ ಬಾಸ್ ಸ್ಪರ್ಧಿ ಅಂಕಿತಾ ಲೋಖಂಡೆ ಗರ್ಭಿಣಿಯಾಗಿದ್ದಾರೆ ಎನ್ನುವ ವಿಚಾರ ಸಖತ್ ಸದ್ದು ಮಾಡಿತ್ತು. ಇದೀಗ ಈ ವಿಚಾರದ ಕುರಿತು ಈ ವಾರ ದೊಡ್ಮನೆಯಿಂದ ಹೊರಬಂದ ಮಾಜಿ ಪತ್ರಕರ್ತೆ ಜಿಗ್ನಾ ವೋರಾ ಈ ಕುರಿತು ಇಟ್ರಸ್ಟಿಂಗ್ ವಿಚಾರಗಳನ್ನು ಬಯಲಿಗೆಳೆದಿದ್ದಾರೆ.
ಜಿಗ್ನಾ ವೋರಾ ಅಂಕಿತಾ ಗರ್ಭಿಣಿಯಾಗಿದ್ದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಆಕೆ ನಿಜವಾಗಿಯೂ ಗರ್ಭಿಣಿಯಾಗಿದ್ದಳೋ ಅಥವಾ ಈ ರೀತಿ ಆಟವಾಡಿದ್ರೋ ಅಂತ ಗೊತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ, ಪರೀಕ್ಷೆ ನಂತರ ವರದಿ ನೆಗೆಟಿವ್ ಬಂತು ಅಂತ ಅಂಕಿತಾ ಹೇಳಿದ್ದಳು ಎಂದು ಜಿಗ್ನಾ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಜಿಗ್ನಾ ವೋರಾ ಅಂಕಿತಾ ನಡುವೆ ಏನು ಮಾತುಕತೆ ನಡೆದಿತ್ತು ಅನ್ನೋ ವಿಚಾರ ಈವರೆಗೂ ಹೊರ ಬಿದ್ದಿಲ್ಲ.
ಆದ್ರೆ ಅಂಕಿತಾ ಗರ್ಭಿಣಿ ಆಗಿದ್ದಾರಾ? ಇಲ್ವಾ? ಯಾಕೆ ಈ ರೀತಿ ಇಲ್ಲ ಅಲ್ಲದ್ದನ್ನ ಹೇಳುತ್ತಿದ್ದಾರೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.