ನ್ಯೂಸ್

ಅತಿಯಾದ ಆತ್ಮವಿಶ್ವಾಸದಿಂದ ಎಡವಿದ್ರಾ ಮಂಜು; ದಿನಸಿ ಸಾಮಾಗ್ರಿ ಹಿಂಪಡೆಯುತ್ತಾರಾ BiggBoss?

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ (BiggBoss) ಆರಂಭವಾಗಿ 14ನೇ ಕಾಲಿಟ್ಟಿದ್ದು, ಸ್ಫರ್ಧಿಗಳು ಜಿದ್ದಿಗೆ ಬಿದ್ದವರಂತೆ ಆಟವಾಡುತ್ತಿದ್ದಾರೆ. ಲಕ್ಷುರಿ ಬಜೆಟ್​ ಟಾಸ್ಕ್​ ಬಳಿಕ ಮನೆಗೆ ಬೇಕಾಗಿದ್ದ ದಿನಸಿಗಳನ್ನು ಆರ್ಡರ್​ ಮಾಡುವುದು ವಾಡಿಕೆ. ಆದರೆ, ಕೆಲವು ಸ್ಫರ್ಧಿಗಳು ಮಾಡಿದ ತಪ್ಪಿನಿಂದಾಗಿ ಅವಕಾಶ ಕೈತಪ್ಪಿತ್ತು. ಇದೀಗ ವಾಪಸ್​ ಪಡೆಯಲಾಗಿದ್ದ ಲಕ್ಷುರಿ ಬಜೆಟ್​ಅನ್ನು ಹಿಂಪಡೆಯಲು ಮನೆಮಂದಿಗೆ ಬಿಗ್​ಬಾಸ್ (BiggBoss)​ ಟಾಸ್ಕ್​ ಒಂದನ್ನು ನೀಡಿದ್ದು, ಈ ವೇಳೆ ಮಂಜು ಹಾಗು ಇತರೆ ಸ್ಫರ್ಧಿಗಳ ನಡುವೆ ಮಾತಿನ ಚಕಮಕಿಯಾಗಿದೆ.

ಮನೆಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ಪಡೆಯಲು ಬಿಗ್​ಬಾಸ್ (BiggBoss)​ ಸ್ಫರ್ಧಿಗಳಿಗೆ ಟಾಸ್ಕ್​ ನೀಡಿದ್ದು, ಇರುವ 9 ಮಂದಿ ಪೈಕಿ 6 ಜನ ಟಾಸ್ಕ್​ನಲ್ಲಿ ಆಡಬೇಕಿದೆ. ಇನ್ನೂ ಟಾಸ್ಕ್​ನ ವಿಚಾರಕ್ಕೆ ಬರುವುದಾದರೆ ಉಗ್ರಂ ಮಂಜು ಚೈತ್ರಾ ಹಾಗೂ ಧನರಾಜ್​ಗೆ ಆಡಲು ಆಗುವುದಿಲ್ಲ ಎಂಬಂತೆ ಮಾತನಾಡಿದ್ದು, ಮಧ್ಯಪ್ರವೇಶಿಸುವ ತ್ರಿವಿಕ್ರಮ್​ ನಿಮ್ಮ ಪ್ರಾಬ್ಲಮ್​ ಏನೆಂದು ಪ್ರಶ್ನಿಸಿದ್ದಾರೆ. ಬಳಿಕ ನಿಮ್ಮ ಕಡೆಯಿಂದ ಏನಾದರೂ ಡ್ಯಾಮೇಜ್​ ಆದರೆ ಏನು ಮಾಡೋದು ಎಂದು ಪ್ರಶ್ನಿಸಿದ್ದಾರೆ. ಬಳಿಕ ಮಂಜು ಹಾಗೂ ಚೈತ್ರಾ ಟಾಸ್ಕ್​ ಆಡಿದ್ದು, ಮಂಜು ಎಡವಿರುವುದನ್ನ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನೋಡಬಹುದಾಗಿದೆ.

ಟೀಕೆ ಓಕೆ, ಸೋತ್ರೆ ಜೋಕೆ! ಎಂಬ ಶೀರ್ಷಿಕೆಯಡಿ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಮಂಜು ವಿಫಲರಾಗುತ್ತಿದ್ದಂತೆ ಮೋಕ್ಷಿತಾ ಕೋಪಿಸಿಕೊಂಡಿದ್ದು, ಹನುಮಂತ, ಭವ್ಯಾ ಹಾಗೂ ತ್ರಿವಿಕ್ರಮ್​ ಕುಳಿತು ವೀಕ್ಷಿಸುತ್ತಿರುತ್ತಾರೆ. ಸದ್ಯ ಈ ಪ್ರೋಮೋ ವೈರಲ್​ ಆಗಿದ್ದು, ಅಂತಿಮವಾಗಿ ಟಾಸ್ಕ್​ನಲ್ಲಿ ಯಾರು ಗೆಲ್ಲಲಿದ್ದಾರೆ ಎಂದು ಕಾದು ನೋಡಬೇಕಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.