ಮುಂಬೈ: ಬಿಗ್ಬಾಸ್ ಒಟಿಟಿ ಸೀಸನ್-3 ಕಾರ್ಯಕ್ರಮ ಎಲ್ಲರನ್ನೂ ಮನರಂಜಿಸುತ್ತಿದೆ. ನಟ ಅನಿಲ್ ಕಪೂರ್ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಈ ಬಿಗ್ಬಾಸ್ ಒಟಿಟಿ ಸೀಸನ್-3 ಮನೆಯಲ್ಲಿ ಕಪಾಳಮೋಕ್ಷದ ಸೀನ್ ಮುಗಿದ ನಂತರ ಬಿಸಿಯಕಾವು ಹೆಚ್ಚಾಗಿಯೇ ಇದೆ. ಈಗ ಬಿಗ್ಬಾಸ್ ಒಟಿಟಿ 3ರ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದು ಬಿಗ್ಬಾಸ್ ಮನೆಯಲ್ಲಿರುವ ಸದಸ್ಯರಿಂದಲ್ಲಾ.... ಯಾರದೇ ಪರ್ಮಿಷನ್ ಪಡೆಯದೆ, ಯಾರಿಗೂ ಹೇಳದೆ ಮನೆಗೆ ಬಂದ ವಿಶೇಷ ಅತಿಥಿಯಿಂದಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಯಾರ ಆ ಅತಿಥಿ..? ಇಲ್ಲಿದೆ ನೋಡಿ ವಿವರ.
ಲವಕೇಶ್ ಕಟಾರಿಯಾಗೆ ಗಾರ್ಡನ್ ಏರಿಯಾದಲ್ಲಿ ಕೈಕೋಳ ಹಾಕುವಂತೆ ಬಿಗ್ ಬಾಸ್ ಶಿಕ್ಷಿಸಿದ್ದಾರೆ. ಲವಕೇಶ್ ಶಿಕ್ಷೆಗೆ ಒಳಗಾಗಿ ಅವರು ಕುಳಿತಿರುವ ಹಿಂದೆ ಹಾವು ಹರಿದಾಡುತ್ತಿರುವುದು ವೈರಲ್ ಆಗಿರುವ ಬಿಗ್ಬಾಸ್ ಮನೆಯ ವೀಡಿಯೋದಲ್ಲಿ ಕಾಣಿಸುತ್ತಿದೆ. ಈ ವೀಡಿಯೊ ನೋಡಿ ಎಲ್ಲರೂ ಶಾಕ್ ಆಗಿದ್ದು, ಅಭಿಮಾನಿಗಳು ಅಮಾನವೀಯ ಎಂದು ಹೇಳಿದ್ದಾರೆ. ನೆಟ್ಟಿಗರು ಬಿಗ್ಬಾಸ್ ತಯಾರಕರಲ್ಲಿ ಮಾನವೀಯತೆ ಉಳಿದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
12 ಗಂಟೆಗೂ ಹೆಚ್ಚು ಕಾಲ ಲವಕೇಶ್ ಕೈಗೆ ಕೋಳ ಹಾಕಿ ಕುಳಿತ್ತಿದ್ದಾರೆ. ಆದರೆ ಆತನಿಗೆ ಶಿಕ್ಷೆಯ ಹಿಂದಿನ ಕಾರಣ ಇನ್ನೂ ಬಹಿರಂಗವಾಗಿಲ್ಲ. ವೈರಲ್ ವೀಡಿಯೋ ನೋಡಿ ಕೆಲವರು ಇದನ್ನು ಮಾಡಿದ ಕ್ಲಿಪ್ ಎಂದು ಹೇಳಿದ್ದಾರೆ. ಆದರೆ ಮನೆಯೊಳಗೆ ಹಾವು ಕಾಣಿಸಿಕೊಂಡಿರುವ ಬಗ್ಗೆ ಬಿಗ್ಬಾಸ್ ಕಾರ್ಯಕ್ರಮದಿಂದ ಯಾವುದೇ ದೃಢೀಕರಣ ಅಥವಾ ನಿರಾಕರಣೆ ಬಂದಿಲ್ಲ. (ಏಜೆನ್ಸೀಸ್)