ಸ್ವತ: ಕಿಚ್ಚ ಸುದೀಪ್ ಬಿಗ್ಬಾಸ್ಗೆ ಟ್ವೀಟ್ ಮೂಲಕ ವಿದಾಯ ಘೋಷಿಸಿದ್ದು ಎಲ್ಲರಿಗೂ ತಿಳಿದ ವಿಚಾರ. ಆದರೆ ಆ ನಂತರದಲ್ಲಿ ಬಿಗ್ಬಾಸನ್ನ ಯಾರು ನಿರೂಪಣೆ ಮಾಡುತ್ತಾರೆಂಬ ಪ್ರಶ್ನೆಗೆ ಉತ್ತರವಿನ್ನೂ ಸಿಕ್ಕಿಲ್ಲ. 11 ಸೀಸನ್ನ ಶೋ ಫಾರ್ಮ್ಯಾಟ್ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ ಕಿಚ್ಚ ಸುದೀಪ್ ನಿರೂಪಕರಾಗಿ 11 ಸೀಸನ್ನಲ್ಲೂ ಮಿಂಚಿದ್ರು ಅವರ ಸ್ಥಾನವಂತೂ ಬದಲಾಗಿರಲಿಲ್ಲ.
ಸದ್ಯ ನಿರೂಪಣೆ ಮಾಡೋದು ಯಾರು ಜತೆಗೆ ಈ ಬಾರಿಯ ಕಂಟೆಸ್ಟೆಂಟ್ ಲಿಸ್ಟ್ನಲ್ಲಿ ಕೆಲ ಹೆಸರುಗಳು ವೈರಲ್ ಆಗ ತೊಡಗಿದೆ. ಸದ್ಯ ಸುದೀಪ್ ಬದಲಿಗೆ ಬೇರೊಬ್ಬರ ಹುಡುಕಾಟ ನಡೆಯುತ್ತಿದ್ದು, ಚಾನಲ್ ಸಹಿತ ಚಲನಚಿತ್ರರಂಗದ ಪ್ರಮುಖರ ಜತೆಗೆ ಈ ಬಗ್ಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಮತ್ತೊಂದೆಡು ಸುದೀಪ್ ಕೆಲ ಷರತ್ತುಗಳನ್ನ ಚಾನಲ್ ಮುಂದಿಟ್ಟಿದ್ದು, ಅದಕ್ಕೆ ಒಪ್ಪಿಗೆಯಾದಲ್ಲಿ ಅವರೇ ಮುಂದುವರೆಯುವ ನಿರ್ಧಾರ ತೆಗೆದುಕೊಳ್ಳುತ್ತಾರೆಂದೂ ಹೇಳಲಾಗುತ್ತಿದೆ.
ಸುದೀಪ್ 11 ವರ್ಷಗಳಿಂದ ಈ ಶೋನ ಪ್ರಮುಖ ಫೇಸ್ ಆಗಿದ್ದು, ಪ್ರೇಕ್ಷಕರ ಮನ ಗೆಲ್ಲುವಿಕೆಯಲ್ಲಿ ಯಶಸ್ವಿಯಾಗಿದ್ದರು. ಕನ್ನಡದಲ್ಲಿ ಬಿಗ್ಬಾಸ್ ಇಷ್ಟು ದೊಡ್ಡ ಮಟ್ಟಕ್ಕೆ ಯಶಸ್ವಿಯಾಗಲೂ ಸುದೀಪ್ ಪ್ರಮುಖ ಕಾರಣ ಅಂದ್ರೆ ತಪ್ಪಾಗೋದಿಲ್ಲ.
ಸುದೀಪ್ಅವರ ವಾರದ ಕಥೆ ಕಿಚ್ಚನ ಜತೆಯ ಎಪಿಸೋಡ್ಗಳನ್ನ ಮಾತ್ರ ವೀಕ್ಷಿಸುವ ದೊಡ್ಡ ಬಳಗವೇ ಇದೆ. ಹೀಗಾಗಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಕಿಚ್ಚ ಸುದೀಪ್ ಅವರನ್ನ ಬಿಟ್ಟುಕೊಡಲು ಕಲರ್ಸ್ ರೆಡಿ ಇಲ್ಲವೆಂದೂ ಹೇಳಲಾಗುತ್ತಿದೆ. ಇನ್ನು ಈ ಮಧ್ಯೆ ಅನೇಕ ಸೀರಿಯಲ್ ನಟ ನಟಿಯರ ಹೆಸರೂ ಈ ಬಾರಿಯ ಕಂಟೆಸ್ಟೆಂಟ್ಗಳ ಪಟ್ಟಿಯಲ್ಲಿ ಫೈನಲ್ ಆಗಿದೆಯೆಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.