ನ್ಯೂಸ್

ಬಿಗ್‌ ಬಾಸ್‌ನಲ್ಲಿ ಅತೀ ಕಡಿಮೆ ಸಂಭಾವನೆ ಪಡೆಯುತ್ತಿರುವ ಸ್ಪರ್ಧಿ ಇವರೇ..! ಎಷ್ಟು ಸಿಗುತ್ತಿದೆ ಗೊತ್ತಾ? |Biggboss Remuneration

ಬಿಗ್ ಬಾಸ್ ಮನೆಗೆ ಹೋಗಿ ಬಂದರೆ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿತ್ತೆ. ಹೊಸ ಆಫರ್‌ಗಳು ಬರುತ್ತವೆ. ಈ ಕಾರಣಕ್ಕೆ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಸಿಗಲಿ ಅಂತ ಬಯಸುತ್ತಾರೆ. ಮತ್ತೊಂದೆಡೆ ಬಿಗ್​ಬಾಸ್​​ ಮನೆಗೆ ಹೋದವರಿಗೆ ಎಷ್ಟು ದುಡ್ಡು ಕೊಡುತ್ತಾರೆ ಅನ್ನೋ ಮಾತುಕತೆಯೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರೋ ಪ್ರಶ್ನೆಯಾಗಿದೆ.

ಬಿಗ್ ಬಾಸ್ ಗೆದ್ದರೆ 50 ಲಕ್ಷ ರೂಪಾಯಿ ಹಣದ ಜೊತೆಗೆ ಪ್ರತಿವಾರಕ್ಕೆ ಇಂತಿಷ್ಟು ಸಂಭಾವನೆ ಸಿಗುತ್ತೆ. ಮೊದಲೇ ಚರ್ಚೆ ಮಾಡಿದಷ್ಟು ಹಣವನ್ನು ಅವರು ಎಷ್ಟು ವಾರ ಮನೆಯೊಳಗೆ ಇರುತ್ತಾರೋ ಅಷ್ಟು ದಿನವೂ ಸಂಭಾವನೆ ಸಿಗುತ್ತೆ.

ಸದ್ಯ ಬಿಗ್‌ಬಾಸ್‌ನಲ್ಲಿ ಅತೀ ಕಡಿಮೆ ಹಣ ಸಿಕ್ಕಿದ ಸ್ಪರ್ಧಿ ಯಾರು? ಅನ್ನುವುದು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಹಾಗಿದ್ದರೆ, ಆ ಸ್ಪರ್ಧಿ ಯಾರು?

ಸೀಸನ್​11ರಲ್ಲಿ ಅತೀ ಹೆಚ್ಚು ಸಂಭಾವನೆಯನ್ನು 'ಸತ್ಯ' ಧಾರಾವಾಹಿ ಖ್ಯಾತಿಯ ಗೌತಮಿ ಜಾದವ್ ಅವರಿಗೆ ನೀಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಈಗ ಅತೀ ಕಡಿಮೆ ಸಂಭಾವನೆ ಯಾರಿಗೆ ಸಿಕ್ಕಿದೆ ಅನ್ನುವುದು ಚರ್ಚೆಯಾಗುತ್ತಿದೆ.

ಬಿಗ್‌ ಬಾಸ್‌ ಮನೆಯಲ್ಲಿ 8 ವಾರ ಸಂಪೂರ್ನವಾಗಿ ಊರೈಸಿದ ಧನ್​ರಾಜ್​ ಅವರಿಗೆ ವಿರ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಚರ್ಚೆಯಾಗುತ್ತಿದೆ.

ಧನರಾಜ್​ಗೆ ಒಂದು ವಾರಕ್ಕೆ ಧನರಾಜ್ ಮೂವತ್ತು ಸಾವಿರ ರೂಪಾಯಿ ಸಂಭಾವನೆ ಸಿಗುತ್ತಿದ್ದು, ಈಗಾಗಲೇ ಎಂಟು ವಾರಗಳನ್ನು ಪೂರೈಸಿದ್ದಾರೆ. ಹೀಗಾಗಿ ಅವರಿಗೆ ವಾರಕ್ಕೆ 30 ಸಾವಿರದಂತೆ ಎಂಟು ವಾರಗಳಲ್ಲಿ 2 ಲಕ್ಷದ 40 ಸಾವಿರ ರೂಪಾಯಿ ಸಿಗಬಹುದು ಎಂದು ಅಂದಾಜು ಮಾಡಲಾಗಿದೆ.

ಧನ್​ರಾಜ್ ಹನುಮಂತನ ಜೊತೆ ಸೇರಿ ಮನರಂಜನೆಯನ್ನು ನೀಡುತ್ತಿದ್ದಾರೆ. ಇನ್ನೂ ಕೆಲವು ವಾರ ಬಿಗ್‌ಬಾಸ್ ಮನೆಯೊಳಗೆ ಧನ್​ರಾಜ್​ ಇರುತ್ತಾರೆಂದು ಜನ ಊಹಿಸುತ್ತಿದ್ದಾರೆ.