ನ್ಯೂಸ್

ಬಿಗ್​​ ಬಾಸ್​​​ ಮನೆಯಲ್ಲಿ ಹೊಸದೊಂದು ಲವ್​ ಸ್ಟೋರಿ; ಸಂಗೀತಾ - ಕಾರ್ತಿಕ್ ಮಧ್ಯೆ ಸ್ನೇಹನಾ ಪ್ರೀತಿನಾ?

Bigg Boss Love story : ಕಲರ್ಸ್​​​ ಕನ್ನಡದ ಆಫಿಶಿಯಲ್​​​ ಎಕ್ಸ್​​ (ಟ್ವಿಟ್ಟರ್​) ಖಾತೆಯಲ್ಲಿ ಹಂಚಿಕೊಳ್ಳಲಾದ ಬಿಗ್​ ಬಾಸ್​​ ಸೀಸನ್​​ 9ರ ವಿಡಿಯೋವೊಂದು ನೆಟ್ಟಿಗರಲ್ಲಿ ಸಾಕಷ್ಟು ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ಎಲ್ಲಾ ಸೀಸನ್​ನಲ್ಲೂ ಒಂದಲ್ಲ ಎರಡು ಜೋಡಿಗಳ ಮಧ್ಯೆ ಪ್ರೇಮ ಹುಟ್ಟುವ ಲಕ್ಷಣ ಕಾಣುತ್ತಿದೆ. ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಇಬ್ಬರೂ ದಿನ ಕಳೆದಂತೆ ಹತ್ತಿವಾಗುತ್ತಿದ್ದಾರೆ.


ಇಬ್ಬರ ಮಧ್ಯೆ ದಿನ ಕಳೆದಂತೆ ಪ್ರೀತಿ ಅರಳುತ್ತಿದೆ ಎಂದು ಜನರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದು, ಇವರ ನಡುವೆ ಪ್ರೀತಿ ಮೂಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ.


ನಾಮಿನೇಷನ್‌ನಿಂದ ಬಚಾವ್‌ ಮಾಡುವ ಟಾಸ್ಕ್‌ನಲ್ಲಿ ಕಾರ್ತಿಕ್‌ ಸಂಗೀತಾ ಪರವಾಗಿ ಆಟವಾಡಿದ್ದು, ಟಾಸ್ಕ್‌ನಲ್ಲಿ ಕೊನೆಯವರೆಗೂ ಸಂಗೀತಾಗೋಸ್ಕರ ಹೋರಾಡಿದರು. ವಿನಯ್‌ ಕೊನೆಯಲ್ಲಿ ಟಾಸ್ಕ್‌ ಗೆದ್ದು ಮೈಕೆಲ್‌ ಅವರನ್ನು ನಾಮಿನೇಷನ್‌ನಿಂದ ಬಚಾವ್‌ ಮಾಡಿದರು.


ಟಾಸ್ಕ್​​ ಸೋತರೂ ಕೂಡಾ ಕಾರ್ತಿಕ್​ ಸಂಗೀತಾ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಾಸ್ಕ್​ ನಂತರದಲ್ಲಿ ಕಾರ್ತಿಕ್​ ಮೈಮೇಲೆ ಹಲವಾರು ಗಾಯಗಳಾಗಿತ್ತು.


ಗಾಯಕ್ಕೆ ಸಂಗೀತಾ ಶೃಂಗೇರಿ ಎಣ್ಣೆ ಹಚ್ಚಿದ್ದಾರೆ. ಸಂಗೀತಾ ಅವರು ಕಾರ್ತಿಕ್‌ ಅವರನ್ನು ಕೇರ್‌ ಮಾಡುವ ರೀತಿ ಎಲ್ಲರಿಗೂ ಇಷ್ಟವಾಗಿದೆ. ಸ್ನೇಹಿತರಾಗಿರುವ ಇವರಿಬ್ಬರ ನಡುವಿನ ಆತ್ಮೀಯತೆ ಜನರಿಗೂ ಇಷ್ಟವಾಗಿದೆ.


ಮುಂಬರುವ ದಿನಗಳಲ್ಲಿ ಇವರಿಬ್ಬರನ್ನೂ ಕಪಲ್ಸ್​​ ಆಗಿ ನೋಡೋಕೆ ಕಾದು ಕುಳಿತಿದ್ದೇವೆ ಎಂದು ಸಾಕಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದಾರೆ.