ನ್ಯೂಸ್

BiggBoss Finale| ನಿಮಗೆ ಒಪ್ಪಿಗೇನಾ ಎನ್ನುತ್ತಿದ್ದಂತೆ ನಾಚಿ ನೀರಾದ ಹನುಮಂತು; ಕಿಚ್ಚನ ಕೌಂಟರ್​ಗೆ ರಜತ್​ ಪೇರೆಂಟ್ಸ್​ ಶಾಕ್​

Webdesk - Manjunatha B

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ (BiggBoss) 11ನೇ ಆವೃತ್ತಿಗೆ ತೆರಬೀಳುವ ಸಮಯ ಬಂದಿದ್ದು, ಜನವರಿ 25 ಹಾಗೂ 26ರಂದು ಗ್ರ್ಯಾಂಡ್​ ಫಿನಾಲೆ ನಡೆಯಲಿದೆ. ಫಿನಾಲೆಯಲ್ಲಿ ರಜತ್​, ತ್ರಿವಿಕ್ರಮ್​, ಹನುಮಂತು, ಉಗ್ರಂ ಮಂಜು, ಮೋಕ್ಷಿತಾ ಹಾಗೂ ಮಂಜು ತಲುಪಿದ್ದು, ಇವರಲ್ಲಿ ಯಾರು ವಿಜೇತರಾಗಲಿದ್ದಾರೆ ಎಂಬುದೇ ಈಗ ಕುತೂಹಲಕಾರಿಯಾಗಿದೆ. ವೀಕ್ಷಕರು ತಮ್ಮ ನೆಚ್ಚಿನ ಸ್ಫರ್ಧಿ ಗೆಲ್ಲುತ್ತಾರೆ ಎಂದು ಊಹಿಸಿದ್ದು, ಅಂತಿಮವಾಗಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಬಿಗ್​ಬಾಸ್ (BiggBoss)​ 11ನೇ ಆವೃತ್ತಿಯ ಫಿನಾಲೆ ವೇದಿಕೆಗೆ ನಿರೂಪಕ ಕಿಚ್ಚ ಸುದೀಪ್ ಗ್ರಾಂಡ್​ ಎಂಟ್ರಿ ಕೊಟ್ಟಿದ್ದಾರೆ. ಮತ್ತೊಂದು ಮೈಲಿಗಲ್ಲು, ಮುರಿಯಲಾಗದ ದಾಖಲೆ ಇದು ಬಿಗ್ ಬಾಸ್ ಕನ್ನಡ 11 ಗ್ರಾಂಡ್ ಫಿನಾಲೆ ಎಂಬ ಶೀರ್ಷಿಕೆಯಡಿ ರಿಲೀಸ್​ ಆಗಿರುವ ಪ್ರೋಮೋ ನೋಡುವುದಾದರೆ ನಿರೂಪಕ ಸುದೀಪ್​ ಅವರು ಮೊದಲಿಗೆ ಸ್ಪರ್ಧಿಗಳನ್ನು ಮಾತನಾಡಿಸಿದ್ದು, ಆ ಬಳಿಕ ಅವರ ಕುಟುಂಬದವರನ್ನು ಮಾತನಾಡಿದ್ದಾರೆ. ಸದ್ಯ ಈ ಪ್ರೋಮೋ ವೈರಲ್​ ಆಗಿದೆ.

ವೈರಲ್​ ಆಗಿರುವ ಪ್ರೋಮೋ ನೋಡುವುದಾದರೆ ಈ ಸೀಸನ್​ ದಾಟದೇ ಇರುವಂತಹ ದಾಖಲೆಗಳಿಲ್ಲ. ಮುಟ್ಟದೆ ಇರುವಂತಹ ಮೈಲಿಗಲ್ಲುಗಳಿಲ್ಲ ಎಂದು ಸುದೀಪ್​ ಹೇಳುತ್ತಾರೆ. ಬಳಿಕ ರಜತ್​ ಅವರಿಗೆ ತಾಯ್ನಾಡಿನ ಮಗ ಎಂದು ಹೇಳುತ್ತಾರೆ. ಅದಕ್ಕೆ ರಜತ್​ ಸರ್​ ಪ್ಲೀಸ್​ ಬೇಡ ಎಂದು ಹೇಳುತ್ತಾರೆ. ಈ ವೇಳೆ ಮಾತನಾಡುವ ರಜತ್​ ತಾಯಿ ತಾಯ್ನಾಡಿನ ಮಗ ಎಂದರ ನಾನು ದೇಶಕ್ಕೋಸ್ಕರ ಹೋರಾಡುವ ಮಗ ಎಂದುಕೊಂಡಿದ್ದೆ. ಇದಕ್ಕೆ ಉತ್ತರಿಸುವ ಸುದೀಪ್​ ಓ ಭ್ರಮೆ ಎಂದು ಹೇಳುತ್ತಾರೆ.

ಬಳಿಕ ಹನುಮಂತು ಅವರನ್ನು ಮಾತನಾಡಿಸುವ ಸುದೀಪ್​ ಈ ಫಿನಾಲೆ ವೀಕ್​ನಲ್ಲಿ ಬಂದಿದ್ದೀರಾ ನಿಮ್ಮ ಹುಡುಗಿಗೆ ಎಷ್ಟು ಖುಷಿ ಇರಬಹುದು ಎಂದು ಕೇಳುತ್ತಾರೆ. ಬಳಿಕ ಹನುಮಂತು ಅವರ ತಾಯಿಯ ಬಳಿ ಏನಮ್ಮಾ ಒಪ್ಪಿಗೆ ಇದೆಯೇನಮ್ಮ ಎಂದು ಕೇಳುತ್ತಾರೆ. ಇದಕ್ಕೆ ಇಲ್ಲ ಎಂದು ಹನುಮಂತು ಅವರ ತಾಯಿ ಹೇಳುತ್ತಾರೆ. ಈಗ ಹನುಮಂತ ಹುಡಗಿನ ನೋಡಿದ್ದಾರೆ, ನೀವು ಹಿಂಗೆ ಗಲಾಟೆ ಮಾಡಿದ್ರೆ ಮುಂದೆ ಯಾವುದಾದರು ಗಂಡನ್ನು ನೋಡ್ತಾರೆ ಎಂದು ಸುದೀಪ್​ ಹನುಮಂತು ಹಾಗೂ ರಜತ್ ಅವರ ತಾಯಿಯ ಕಾಲೆಳೆದಿದ್ದಾರೆ. ಸದ್ಯ ಈ ಪ್ರೋಮೋ ಮಜಭರಿತವಾಗಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.