ಬೆಂಗಳೂರು: ನಿರೂಪಕ "ಕಿಚ್ಚ' ಸುದೀಪ್ ಗೈರು, ಅರ್ಧಕ್ಕೆ ಮೊಟಕಾದ ಶೋ.. ಹೀಗೆ ಈ ಸಲದ ಬಿಗ್ ಬಾಸ್ ಸೀಸನ್ 8 ಹಲವು ಹೊಸತುಗಳಿಗೆ ಸಾಯಾಗಿತ್ತು. ಇದೀಗ ವೀಕ್ಷಕರಿಗೆ ಮತ್ತೊಂದು ಹೊಸತನ್ನು ನೀಡಲು ಕರ್ಲಸ್ ಕನ್ನಡ ವಾಹಿನಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದೇನೆಂದರೆ, ಅರ್ಧಕ್ಕೆ ನಿಂತಿದ್ದ ಬಿಗ್ಬಾಸ್ ಮತ್ತೆ ಶುರುವಾಗಲಿದೆ!
ಹೌದು, ಕರೊನಾ ಪ್ರಕರಣಗಳ ಸಂಖ್ಯೆ ಇಳಿಮುಖಗೊಂಡ ಹಿನ್ನೆಲೆಯಲ್ಲಿ ಇಂಥದ್ದೊಂದು ಮಾತು ಸದ್ಯ ಕಿರುತೆರೆ ವಲಯದಲ್ಲಿ ಸದ್ದು ಮಾಡುತ್ತಿದ್ದು, ಜೂನ್ 20ರಿಂದ ಶೋ ಮತ್ತೆ ಆರಂಭವಾಗಲಿದೆಯಂತೆ. ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ 72ನೇ ದಿನಕ್ಕೆ ಮೊಟಕುಗೊಂಡಿದ್ದ ಈ ಶೋ, ಇದೀಗ ಮತ್ತೆ ಕಿರುತೆರೆಯಲ್ಲಿ ಮೋಡಿ ಮಾಡಲಿದೆ. ಸ್ಪರ್ಧಿಗಳಾದ ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್, ರು ಗೌಡ, ಶುಭಾ ಪೂಂಜ, ವೈಷ್ಣವಿ ಗೌಡ, ಪ್ರಶಾಂತ್ ಸಂಬರಗಿ, ಶಮಂತ್ ಗೌಡ, ನಿಧಿ ಸುಬ್ಬಯ್ಯ, ಚಕ್ರವರ್ತಿ ಚಂದ್ರಚೂಡ, ಅರವಿಂದ್, ದಿವ್ಯಾ ಸುರೇಶ್ ಮತ್ತೆ ಬಿಗ್ಬಾಸ್ ಮನೆಗೆ ಎಂಟ್ರಿಕೊಡಲಿದ್ದಾರೆ.
ಸದ್ಯದ ಮಟ್ಟಿಗೆ 100ದಿನದ ಆಟ ಎಂದು ಹೇಳಲಾಗುತ್ತಿದ್ದು, ಶೋ ಶುರುವಾದ ಮೇಲೆ ಬದಲಾವಣೆ ಆಗುವ ಸಾಧ್ಯತೆ ಇದೆ.