ಹೈದರಾಬಾದ್: ತೆಲುಗು ಕಿರುತೆರೆಯ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ಬಾಸ್ (Bigg Boss) ಆರಂಭವಾಗಿ ವಾರಗಳೇ ಕಳೆದಿದ್ದು, ದಿನ ಕಳೆದಂತೆ ಕಾರ್ಯಕ್ರಮದ ಕುರಿತಾಗಿ ರೋಷಕತೆ ಹೆಚ್ಚಾಗುತ್ತಿದೆ. ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು, ತೆಲುಗು ಪ್ರೇಕ್ಷಕರಿಗೆ ಮನರಂಜನೆ (Entertainment) ನೀಡುವಲ್ಲಿ ಮಾತ್ರ ವಿಫಲವಾಗಿಲ್ಲ.
ಕಾರ್ಯಕ್ರಮ ಶುರುವಾಗಿ ವಾರಗಳು ಕಳೆದಿದ್ದು, ಇದೀಗ ಮನೆಗೆ ವೈಲ್ಡ್ಕಾರ್ಡ್ ಮೂಲಕ ಹೊಸ ಸ್ಫರ್ಧಿಗಳು ಎಂಟ್ರಿ ಕೊಡುತ್ತಿದ್ದಾರೆ. ಈ ಪೈಕಿ ಖ್ಯಾತ ಯೂಟ್ಯೂಬರ್ ಗಂಗವ್ವ (Gangavva) ಕೂಡ ಮನೆಗೆ ಎಂಟ್ರಿ ನೀಡಿದ್ದು, ಜನರಿಗೆ ಮನರಂಜನೆ ನೀಡುವ ಮೂಲಕ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಂಡಿದ್ದಾರೆ.
ಬಯಸ್ಸು 60 ದಾಟಿದರೂ ಮನೆಯಲ್ಲಿರುವ ಸ್ಫರ್ಧಿಗಳಿಗೆ ಟಫ್ ಫೈಟ್ ಕೊಡುವ ಮೂಲಕ ತಾವು ಯಾರಿಗೂ ಕಮ್ಮಿ ಇಲ್ಲ ಎಂದು ನಿರೂಪಿಸಿರುವ ಗಂಗವ್ವ ಅವರಿಗೆ ಹೃದಯಘಾತವಾಗಿದೆ (Heart Attack) ಎಂಬ ಸುದ್ದಿ ಹೊರಬಿದ್ದಿದೆ. ಬಿಗ್ಬಾಸ್ (Bigg Boss) ಮನೆಯಲ್ಲಿರುವಾಗಲೇ ಈ ಘಟನೆ ನಡೆದಿದ್ದು, ತಕ್ಷಣವೇ ಅವರಿಗೆ ವೈದ್ಯಕೀಯ ನೆರವನ್ನು ಒದಗಿಸಲಾಗಿದೆ. ಸದ್ಯ ಅವರು ಪ್ರಾಣಪಾಯದಿಂದ ಪಾರಾಗಿದ್ದು, ವೈದ್ಯರ ನಿಗಾದಲ್ಲಿದ್ದಾರೆ ಎಂದು ವರದಿಯಾಗಿದೆ.