ಮುಂಬೈ: 'ಬಿಗ್ ಬಾಸ್ ಒಟಿಟಿ 2' ಮುಗಿದಿದೆ. ಶೋ ವಿಜೇತರು ಯಾರಾಗಬಹುದು ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಹೌದು, ಎಲ್ವಿಶ್ ಯಾದವ್ ಬಿಗ್ ಬಾಸ್ ಶೋ ವಿಜೇತರಾಗಿದ್ದಾರೆ. ಫಿನಾಲೆಯಲ್ಲಿ ಅಭಿಷೇಕ್ ಮಲ್ಹಾನ್ ಅವರನ್ನು ಸೋಲಿಸಿ ಎಲ್ವಿಶ್ ಟ್ರೋಫಿ ಗೆದ್ದಿದ್ದಾರೆ. ಹರಿಯಾಣದ ಯೂಟ್ಯೂಬರ್ ಎಲ್ವಿಶ್ ಯಾದವ್ ಅವರನ್ನು 'ಬಿಗ್ ಬಾಸ್ OTT 2' ವಿಜೇತ ಎಂದು ಘೋಷಿಸಿದರೆ, ಅಭಿಷೇಕ್ ಮಲ್ಹಾನ್ ಅವರನ್ನು ರನ್ನರ್ ಅಪ್ ಎಂದು ಘೋಷಿಸಲಾಯಿತು. ಶೋನ ಅಂತಿಮ ಸುತ್ತಿನಲ್ಲಿ ಮನೀಶಾ ರಾಣಿ, ಪೂಜಾ ಭಟ್ ಮತ್ತು ಬಾಬಿಕಾ ಧುರ್ವೆ ಇದ್ದರು.
ಅಂದಹಾಗೆ ಈ ಶೋನ ನಿರೂಪಕ ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ಮನೆಯ ವಾಶ್ ರೂಂ ಸ್ವಚ್ಛತೆಯ ಬಗ್ಗೆ, ಅವರ ಯಶಸ್ಸಿನ ಹಿಂದೆ ಇರುವ ವ್ಯಕ್ತಿಗಳು ಯಾರು? ಎಂಬುದನ್ನು ಇದೀಗ ರಿವೀಲ್ ಮಾಡಿದ್ದಾರೆ.
'ಬಿಗ್ ಬಾಸ್ OTT 2'ನ ಅಂತಿಮ ರಾತ್ರಿ ಬಾತ್ರೂಂ ಅನ್ನು ಸ್ವಚ್ಛವಾಗಿಟ್ಟಿದ್ದಕ್ಕಾಗಿ ಸ್ಪರ್ಧಿಗಳನ್ನು ಸಲ್ಮಾನ್ ಹೊಗಳಿದರು. ಈ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿರುವ ಸಲ್ಮಾನ್, ಜೈಲಿನಲ್ಲಿದ್ದಾಗ ನಾನೂ ಬಾತ್‌ರೂಮ್‌ಗಳನ್ನು ಸ್ವಚ್ಛಗೊಳಿಸಿದ್ದೆ. ಯಾವಾಗಲೂ ನನ್ನ ಕೆಲಸವನ್ನು ನಾನೇ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ತಮ್ಮ ಬೋರ್ಡಿಂಗ್ ಶಾಲೆಯ ದಿನಗಳಿಂದಲೇ ಈ ಕೆಲಸಗಳನ್ನು ಸಲ್ಮಾನ್ ಮಾಡುತ್ತಿದ್ದರಂತೆ.
'ಬಿಗ್ ಬಾಸ್ ಒಟಿಟಿ 2' ನಲ್ಲಿ ಬಿಗ್ ಬಾಸ್ ಮನೆಯ ಬಾತ್ ರೂಂ ಅನ್ನು ಸ್ವಚ್ಛವಾಗಿಟ್ಟುಕೊಂಡಿರುವ ಸ್ಪರ್ಧಿ ಪೂಜಾ ಭಟ್ ಅವರನ್ನು ಹೊಗಳಿದ ಸಲ್ಮಾನ್, 'ನಾನು ಬೋರ್ಡಿಂಗ್ ಶಾಲೆಯಲ್ಲಿ ಇದ್ದಾಗಲೂ ಬಾತ್ ರೂಂ ಕ್ಲೀನ್ ಮಾಡಿದ್ದೇನೆ. ನಾನು ನನ್ನ ಸ್ವಂತ ಕೆಲಸವನ್ನು ಜೈಲಿನಲ್ಲಿಯೂ ಮಾಡಿದ್ದೇನೆ. ಯಾವ ಕೆಲಸವೂ ಚಿಕ್ಕದಲ್ಲ ಅಥವಾ ದೊಡ್ಡದಲ್ಲ' ಎಂದು ತಿಳಿಸಿದ್ದಾರೆ.
ಆದರೆ, ಶೋನಲ್ಲಿ ಭಾಯಿಜಾನ್ ಅವರ ಯಶಸ್ಸಿನ ಹಿಂದೆ ಎಷ್ಟು ಜನ ಡ್ರೀಮ್ ಗರ್ಲ್ಸ್ ಇದ್ದಾರೆ ಎಂದು ಪ್ರಶ್ನೆ ಕೇಳಿದಾಗ ಇದಕ್ಕೆ ಸಲ್ಮಾನ್ ತಕ್ಷಣವೇ ಉತ್ತರಿಸಿದರು, "ನಾಲ್ವರು...ಇಬ್ಬರು ತಾಯಂದಿರು ಮತ್ತು ಇಬ್ಬರು ಸಹೋದರಿಯರು...''. ಸಲ್ಮಾನ್ ಅವರ ಈ ಉತ್ತರವನ್ನು ಕೇಳಿದ ಅವರ ಅಭಿಮಾನಿಗಳು ಭಾಯಿಜಾನ್ ಅವರನ್ನು ಹೊಗಳುತ್ತಿದ್ದಾರೆ. ಅಷ್ಟೇ ಅಲ್ಲ, ಸಲ್ಮಾನ್ ಅವರನ್ನು ರಿಯಲ್ ಲೈಫ್ ಸೂಪರ್‌ಸ್ಟಾರ್ ಎಂದು ಕರೆಯುತ್ತಿದ್ದಾರೆ.