ನ್ಯೂಸ್

Bigg BOss : 3 ತಿಂಗಳು ದೂರ ಇದ್ದ ಅಕ್ಕನನ್ನು ಮರೆತ ತಮ್ಮ; ಬಿಕ್ಕಿ ಬಿಕ್ಕಿ ಅತ್ತ ಮೋಕ್ಷಿತಾ...

Bigg Boss : ಬಿಗ್​ಬಾಸ್ ಮನೆಯಲ್ಲಿ ಈ ವಾರ ಸಂಭ್ರಮವೋ ಸಂಭ್ರಮ. ಬಿಗ್​ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬದವರು ಆಗಮಿಸುತ್ತಿದ್ದಾರೆ.  ಮೊದಲಿಗೆ ಭವ್ಯಾರ ಸಹೋದರಿ, ಸಹೋದರಿಯ ಮಗಳು ಮತ್ತು ಅವರ ತಾಯಿ ಆಗಮಿಸಿದರು.  ತ್ರಿವಿಕ್ರಮ್​​ ಅವರ ತಾಯಿ ಕೂಡಾ ಬಂದಿದ್ದರು. ಇಂದು ಮೋಕ್ಷಿತಾ ಅವರ ಫ್ಯಾಮಿಲಿ ಬಿಗ್​ಬಾಸ್​ ಮನೆಗೆ ಎಂಟ್ರಿಯಾಗಿದೆ. ಈ ಪ್ರೋಮೋವನ್ನಿ ಬಿಗ್​ಬಾಸ್​​ ತಂಡ ಹಂಚಿಕೊಂಡಿದೆ. ಈ ಪ್ರೋಮೋ ನೋಡಿದ ವೀಕ್ಷಕರು ಕಣ್ಣೀರು ಹಾಕುತ್ತಿದ್ದಾರೆ.

ಮೋಕ್ಷಿತಾ ಅವರ ತಮ್ಮ ವಿಶೇಷ ಚೇತನ. ಅವರಿಗೆ ಹೊರ ಪ್ರಪಂಚದ ಜ್ಞಾನ ಪರಿಪೂರ್ಣವಾಗಿ ಇಲ್ಲ. ಮೋಕ್ಷಿತಾ ಅವರು ತಮ್ಮನ ಅಷ್ಟು ದಿನ ಬಿಟ್ಟಿದ್ದೇ ಇಲ್ಲ. ಆದರೆ, ಬಿಗ್ ಬಾಸ್​ಗಾಗಿ ಅವರು ಕುಟುಂಬವನ್ನು ಮೂರು ತಿಂಗಳು ಬಿಟ್ಟಿದ್ದದ್ದಾರೆ. ಅಪ್ಪ ಅಮ್ಮ ತಮ್ಮ ಬಿಗ್​​ಬಾಸ್​ ಮನೆಗೆ ಬಂದಿರುವುದನ್ನು ನೋಡಿದ ಮೋಕ್ಷಿತಾ ಖುಷಿಯಿಂದ ಓಡಿ ಬಂದಿದ್ದಾರೆ. ತಮ್ಮನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಆದರೆ ಮೋಕ್ಷಿತಾ ಅವರ ಗುರುತೆ ಅವರ ತಮ್ಮನಿಗೆ ಸಿಕ್ಕಿಲ್ಲ.

ಪುಟಾಣಿ.. ಪುಟಾಣಿ ಎಂದು ಮೋಕ್ಷಿತಾ ಅವರ ತಮ್ಮನನ್ನು ಕರೆದರು ಅವರಿಗೆ ಗುರುತೆ ಸಿಕ್ಕಿಲ್ಲ...ಮೋಕ್ಷಿತಾ ಅವರು ತಮ್ಮನ ಅಷ್ಟು ದಿನ ಬಿಟ್ಟಿದ್ದೇ ಇಲ್ಲ. ಆದರೆ, ಬಿಗ್ ಬಾಸ್​ಗಾಗಿ ಅವರು ಕುಟುಂಬವನ್ನು ಮೂರು ತಿಂಗಳು ಬಿಟ್ಟಿದ್ದದ್ದಾರೆಈ ಕಾರಣಕ್ಕೆ ಮೋಕ್ಷಿತಾ ಅವರನ್ನು ತಮ್ಮ ಮರೆತೇಬಿಟ್ಟಿದ್ದಾರೆ.  ನನ್ನ ಮರೆತು ಬಿಟ್ಟಿದ್ದಾನೆ ಎಂದು ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ದೃಶ್ಯ ನೋಡುಗರ ಕರುಳನ್ನು ಕಿವುಚಿದೆ. ಗೌತಮಿ ಈ ದೃಶ್ಯವನ್ನು ನೋಡಿ ಕಣ್ಣೀರು ಹಾಕಿದ್ದಾರೆ.